ಹಾಸನ(ಜೂ.14): ಜಿಲ್ಲೆಯಲ್ಲಿ ಶನಿವಾರ 11 ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿವೆ. ಇಲ್ಲಿವರೆಗೂ ಒಟ್ಟು 237 ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾಧಿ​ಕಾರಿ ಆರ್‌ ಗಿರೀಶ್‌ ತಿಳಿಸಿದರು.

ನಗರದ ಜಿಲ್ಲಾ​ಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ಸೋಂಕಿತರ ಸಂಖ್ಯೆ 237ಕ್ಕೆ ಏರಿದೆ. ಇದರಲ್ಲಿ 184 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಹಾನಗರಗಳಲ್ಲಿ ವ್ಹೀಲಿಂಗ್‌, ಹಳ್ಳಿ ಭಾಗದಲ್ಲಿ ಒಂದೇ ಬೈಕ್‌ನಲ್ಲಿ ಐವರು ಸಂಚರಿಸುವ ಕ್ರೇಜ್‌..!

ಓರ್ವ ಸೋಂಕಿತರು ಜೂ.12ರಂದು ಮೃತಪಟ್ಟಿದ್ದಾರೆ. ಹಾಲಿ ಸಕ್ರಿಯ 52ಮಂದಿ ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಪತ್ತೆಯಾದ ಸೋಂಕಿತರಲ್ಲಿ 7 ಮಂದಿ ಚನ್ನರಾಯಪಟ್ಟಣ ಹಾಗೂ ಒಬ್ಬರು ಹೊಳೆನರಸೀಪುರ ತಾಲ್ಲೂಕಿಗೆ ಸೇರಿದವರಾಗಿದ್ದಾರೆ, ಎಲ್ಲರೂ ಮುಂಬೈನಿಂದ ಪ್ರಯಾಣ ಬೆಳೆಸಿದ ಹಿನ್ನಲೆ ಹೊಂದಿದ್ದಾರೆ.

ಇದಲ್ಲದೆ, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಬೇಲೂರು ಹಾಗೂ ಹಾಸನದ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಅರಕಲಗೂಡು ತಾಲೂಕಿನ 5ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.