ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಮತ್ತು ದೊಡ್ಡ ಹನಸೋಗೆ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ 14 ಗ್ರಾಮಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರದಿಂದ 10 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಕೆ.ಆರ್‌. ನಗರ (ಅ.16): ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಮತ್ತು ದೊಡ್ಡ ಹನಸೋಗೆ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ 14 ಗ್ರಾಮಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರದಿಂದ 10 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಚುಂಚನ ಕಟ್ಟೆ ಹೋಬಳಿ ಚನ್ನಂಗೆರೆ ಗ್ರಾಪಂ ವ್ಯಾಪ್ತಿಯ ಬಂಡಹಳ್ಳಿ ಗ್ರಾಮದಲ್ಲಿ (village) ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮತ್ತು ಶಾಸಕರ (MLA) ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ನೇರವಾಗಿ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಕೆ.ಆರ್‌. ನಗರ ಮತ್ತು ಸಾಲಿಗ್ರಾಮ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ವಿದ್ಯುತ್‌ ಘಟಕ ಸ್ಥಾಪಿಸಲು 120 ಕೋಟಿ ಹಣ ಮಂಜೂರಾಗಿರುವುದರ ಜತೆಗೆ ಹನಸೋಗೆ, ಮಾರಗೌಡನಹಳ್ಳಿ, ಹೆಬ್ಬಾಳು ಸೇರಿದಂತೆ ಇತರ ಗ್ರಾಮಗಳಲ್ಲಿಯೂ ವಿದ್ಯುತ್‌ ಉಪ ಕೇಂದ್ರ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಪೂರ್ಣವಾಗಿರುವುದು ಜಿಲ್ಲೆಯಲ್ಲಿ ನಮ್ಮಲ್ಲಿ ಮೊದಲು ಎಂದು ತಿಳಿಸಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಕೆಲವು ಅಹವಾಲು ಮತ್ತು ದೂರುಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ಅವರು, ಉಳಿದ ದೂರುಗಳ ಬಗ್ಗೆ ಕ್ರಮ ಕೈಗೊಂಡು ಒಂದು ವಾರದಲ್ಲಿ ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.

ಆನಂತರ ಅವರು ಪಂಚಾಯ್ತಿ ವ್ಯಾಪ್ತಿಯ ಕೋಳೂರು ಸಣ್ಣೇಗೌಡನಕೊಪ್ಪಲು, ಚಿಕ್ಕಹನಸೋಗೆ, ಚನ್ನಂಗೆರೆ ಮತ್ತು ಎರೆಮನುಗನಹಳ್ಳಿ ಗ್ರಾಮಗಳಿಗೆ ಅಧಿಕಾರಿಗಳಿಗೆ ಜತೆ ತೆರಳಿ ಸಭೆ ನಡೆಸಿದರು.

ಚನ್ನಂಗೆರೆ ಗ್ರಾಪಂ ಅಧ್ಯಕ್ಷೆ ಸವಿತಾ ಕುಚೇಲ, ಹನಸೋಗೆ ಗ್ರಾಪಂ ಮಾಜಿ ಅಧ್ಯಕ್ಷ ಎಚ್‌.ಟಿ. ರಾಜೇಶ್‌, ತಾಪಂ ಮಾಜಿ ಸದಸ್ಯ ಶಿವಣ್ಣ, ಜಿಲ್ಲಾ ಯುವ ಜೆಡಿಎಸ್‌ ಮುಖಂಡ ಎಚ್‌.ಕೆ. ಮಧುಚಂದ್ರ, ತಹಸೀಲ್ದಾರ್‌ ಮೋಹನ್‌ಕುಮಾರ್‌, ತಾಪಂ ಇಒ ಎಚ್‌.ಕೆ. ಸತೀಶ್‌, ಪಿಐಆರ್‌ ಶ್ರೀಕಾಂತ್‌ ಇದ್ದರು.

ಕಾಂಗ್ರೆಸ್‌ಗೆ ಸಾರಾ ಸಲಹೆ

ಕಿಡ್ನಿ ಡಯಾಲಿಸಿಸ್‌ ಮಾಡಿಸುವ ವ್ಯಕ್ತಿಗಳ ನಂಬರಿಗೆ ನಾನು ಫೋನ್‌ ಪೇ ಮಾಡಿಸ್ತೀನಿ, ಆದರೆ ಇನ್ನು ಕೆಲವರು ತಾಲೂಕಿನ ಸ್ವಾಸ್ಥ ಹಾಳು ಮಾಡಲು ಕೆಲ ಯುವಕರಿಗೆ ಕುಡಿಸಲು ಫೋನ್‌ ಪೇ ಮಾಡುತ್ತಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಅವರು ಪರೋಕ್ಷವಾಗಿ ಟೀಕಿಸಿದರು.

ಸಾಲಿಗ್ರಾಮ ತಾಲೂಕಿನ ಸಾಲೇ ಕೊಪ್ಪಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 1.50 ಕೋಟಿ ರು. ವೆಚ್ಚದಲ್ಲಿ ಗ್ರಾಮ (Village) ಪರಿಮಿತಿಯಲ್ಲಿ ಕೈಗೊಂಡಿರುವ ರಸ್ತೆ

ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಈ ರೀತಿ ಯುವ (Youths) ಸಮುದಾಯವನ್ನು ಹಾಳು ಮಾಡಿ ರಾಜಕಾರಣವನ್ನು ಮಾಡುವ ಬದಲು ಮನೆಯಲ್ಲಿ ಇರುವುದು ಒಳ್ಳೆಯದು ಎಂದರು.

ರಾಜಕೀಯ ಬಿಡಲು ಯೋಚಿಸಿದ್ದೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದ ಮೇಲೆ ಅಭಿವೃದ್ಧಿ ಪರ ಕೆಲಸ ಮಾಡಿದವರಿಗೆ ಇಲ್ಲಿ ಮನ್ನಣೆ ಸಿಗುವುದಿಲ್ಲ ಎಂದು ರಾಜಕೀಯ ಬಿಡುವ ನಿರ್ಧಾರ ಮಾಡಿದ್ದೆ, ಆದರೆ ನನ್ನ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ರಾಜಕೀಯ ಕ್ಷೇತ್ರದಲ್ಲಿ ಇದ್ದೇನೆ ಎಂದರು.

ಅಪ್ಪು ನಮನ ಮತ್ತು ಜಲಪಾತೋತ್ಸವ

ಈ ತಿಂಗಳ 29 ರಂದು ಕೆ.ಆರ್‌. ನಗರದಲ್ಲಿ ತಾಲೂಕಿನ ಮೊಮ್ಮಗ ಪುನೀತ್‌ ರಾಜ…ಕುಮಾರ್‌ ಅವರ ನೆನಪಿಗಾಗಿ ಅಪ್ಪು ನಮನ ಮತ್ತು 30 ರಂದು ಚುಂಚನಕಟ್ಟೆಯಲ್ಲಿ ಜಲಪಾತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇವೆರಡು ಕಾರ್ಯಕ್ರಮಗಳಿಗೆ ಎರಡು ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು

ಜೆಡಿಎಎಸ್‌ ಸೇರ್ಪಡೆ: ಹಳಿಯೂರು ಗ್ರಾಪಂ ಸದಸ್ಯೆ ರೇಣುಕಾ ಪ್ರಭಾಕರ್‌, ಯುವ ಕಾಂಗ್ರೆಸ್‌ ಮುಖಂಡ ಎಸ್‌.ಕೆ. ಚೇತನ್‌, ಸಾಗರ್‌, ಕಿರಣ…, ಅರುಣ, ಅನಿಲ…, ಸೇರಿದಂತೆ ಮತ್ತಿತರರು ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.

ಜಿಲ್ಲಾ ಯುವ ಜೆಡಿಎಸ್‌ ಮುಖಂಡ ಮಧುಚಂದ್ರ, ಹಳಿಯೂರು ಗ್ರಾಪಂ ಅಧ್ಯಕ್ಷ ಎಚ್‌.ಆರ್‌. ದಿನೇಶ್‌, ಉಪಾಧ್ಯಕ್ಷೆ ಹೇಮಲತಾ, ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್‌.ಎಸ್‌. ಶಿವಸ್ವಾಮಿ, ನಿರ್ದೇಶಕರಾದ ಹುಚ್ಚೇಗೌಡ, ವಿವೇಕ್‌, ಮುಖಂಡರಾದ ಭದ್ರೇಗೌಡ, ಗೋಪಾಲ…, ಕುಮಾರ್‌, ಪತ್ರಾಪ್‌, ರಾಜೇಂದ್ರ, ದೇವೆಂದ್ರ, ಮೂರ್ತಿ, ಕೀರ್ತಿ, ಜಯಕೀರ್ತಿ, ಸತೀಶ, ಶಿವಣ್ಣ, ನಿಂಗಣ್ಣ, ರಾಘವೇಂದ್ರ, ಎಚ್‌.ಕೆ. ಕೀರ್ತಿ,

ಎಇಇ ವಿಜಯಕುಮಾರ್‌, ಎಇ ಶಿವಪ್ಪ, ಆರ್‌ಐ ಚಿದಾನಂದ್‌, ಪಿಡಿಓ ಚಿದಾನಂದ್‌ ಇದ್ದರು.