ಮೋದಿ ಮತ್ತೆ ಪ್ರಧಾನಿಯಾಗಲೆಂದು ಮಾದೇಶ್ವರ ಬೆಟ್ಟ ಹತ್ತಿದ 102ರ ಅಜ್ಜಿ..!
ತುಮಕೂರು ಜಿಲ್ಲೆ ತಿಪಟೂರು ಮೂಲದ ಶತಾಯುಷಿ ಅಜ್ಜಿ ಪಾರ್ವತಮ್ಮ ಕುಟುಂಬದವರ ಜೊತೆ ತಾಳಬೆಟ್ಟದಿಂದ ಮಾದಪ್ಪನ ಬೆಟ್ಟಕ್ಕೆ 18 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ ಆರು ವರ್ಷಗಳಿಂದಲೂ ಇವರು ಪ್ರತಿವರ್ಷ ಪಾದಯಾತ್ರೆ ಮಾಡುತ್ತಿದ್ದು, ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ಪಾದಯಾತ್ರೆ ಕೈಗೊಂಡಿದ್ದಾರೆ.
ಹನೂರು (ಚಾಮರಾಜನಗರ)(ಮಾ.08): ಮೋದಿ ಮತ್ತೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ಶತಾಯುಷಿ ಅಜ್ಜಿಯೊಬ್ಬರು ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ಮೂಲದ ಶತಾಯುಷಿ ಅಜ್ಜಿ ಪಾರ್ವತಮ್ಮ (102), ಕುಟುಂಬದವರ ಜೊತೆ ತಾಳಬೆಟ್ಟದಿಂದ ಮಾದಪ್ಪನ ಬೆಟ್ಟಕ್ಕೆ 18 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ ಆರು ವರ್ಷಗಳಿಂದಲೂ ಇವರು ಪ್ರತಿವರ್ಷ ಪಾದಯಾತ್ರೆ ಮಾಡುತ್ತಿದ್ದು, ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ಪಾದಯಾತ್ರೆ ಕೈಗೊಂಡಿದ್ದಾರೆ.
ನದಿ ಪಾತ್ರಗಳಲ್ಲಿರುವ ಜನರ ರಕ್ಷಣೆಗೆ ಸರ್ಕಾರ ಕ್ರಮವಹಿಸಲಿ: ಸಚಿವ ಕೃಷ್ಣ ಬೈರೇಗೌಡ
‘ದೇಶಕ್ಕೆ ಒಳ್ಳೆಯದಾಗಬೇಕು, ಪ್ರಧಾನಿ ಮೋದಿ 3 ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಬೇಕು, ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಬೇಕು’ ಎಂದು ಅಜ್ಜಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.