ಮೈಸೂರು (ಸೆ.04): ಬಿಎಸ್ಪಿಯ ಮೈಸೂರು ವಲಯ, ವಿಭಾಗ, ಜಿಲ್ಲಾ ಹಾಗೂ ತಾಲೂಕು ಸಮಿತಿ ಗಳನ್ನು ಪುನರ್ ರಚಿಸಲು ಸೆ.5ರಂದು ಬೆಳಗ್ಗೆ 11 ಕ್ಕೆ ಪುರಭವನದಲ್ಲಿ ಪಕ್ಷ ದ ಸಭೆ ಕರೆಯಲಾಗಿದೆ. 

ಆದ್ದರಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳ ಮತ್ತು ಈ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪಕ್ಷದ ಎಲ್ಲಾ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಮುಖಂಡ ರು ಮತ್ತು ಕಾರ್ಯಕರ್ತರು ತಪ್ಪದೆ ಪಾಲ್ಗೊಳ್ಳಬೇಕು ಎಂದು ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂದು 100 ಮಂದಿ ರಾಜೀನಾಮೆ: ಬಿಎಸ್ಪಿ ಮೈಸೂರು ವಲಯದ ಉಸ್ತುವಾರಿಗಳಾಗಿದ್ದ ಸೋಸಲೆ ಸಿದ್ದರಾಜು, ಭೀಮನಹಳ್ಳಿ ಸೋಮೇಶ್, ರಾಹುಲ್, ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ನಗರಾಧ್ಯಕ್ಷ ಬಸವರಾಜು, ಮತ್ತಿತರರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಸಭೆಯಲ್ಲಿ ಕಾರಣ ನೀಡಲಿದ್ದಾರೆ.