ಹಟ್ಟಿ ಗೋಲ್ಡ್ ಮೈನ್ಸ್: ಕಾಗದದಲ್ಲೇ ಉಳಿದಿದ್ದ ಬೇಡಿಕೆಯನ್ನು ಈಡೇರಿಸಿದ ಸಚಿವ ನಿರಾಣಿ

* ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ
* ಆಸ್ಪತ್ರೆ ನಿರ್ಮಾಣಕ್ಕೆ ಎಚ್‌ಜಿಎಂಎಲ್, ಡಿಎಂಎಪ್ ಹಾಗೂ ಕಾರ್ಮಿಕ ಇಲಾಖೆ  ಸಹಭಾಗಿತ್ವ 
* ಕೋವಿಡ್‌ ಸೋಂಕು ಹೆಚ್ಚುತ್ತಿರುವ ಪ್ರಯುಕ್ತ
* ತಕ್ಷಣವೇ ಸಿಟಿ ಸ್ಕ್ಯಾನರ್  ಖರೀದಿಗೆ ಸೂಚನ
* ಹಟ್ಟಿ  ಕ್ಯಾಂಪಸ್‌ನಲ್ಲಿ ನರ್ಸಿಂಗ್ ಕಾಲೇಜು ಆರಂಭ

100 Bed Super super specialty hospital build Hatti gold mine Says Minister Nirani rbj

ಹಟ್ಟಿ, (ರಾಯಚೂರು), (ಮೇ.19): ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ಸ್ಥಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಹಟ್ಟಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವುಳ್ಳ ನೂರು ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ  ಆಸ್ಪತ್ರೆ ತಲೆ ಎತ್ತಲಿದೆ.

ಹಟ್ಟಿ ಗೋಲ್ಡ್ ಮೈನ್ಸ್  , ಜಿಲ್ಲಾ ಖನಿಜ ನಿಧಿ (ಡಿಎಂಎಪ್ ) ಹಾಗೂ ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ಈ ಆಸ್ಪತ್ರೆ
ನಿರ್ಮಾಣವಾಗಲಿದ್ದು, ಅಂತಾರಾಷ್ಟ್ರೀಯ ದರ್ಜೆಯ ವೈದ್ಯಕೀಯ ಸೌಲಭ್ಯಗಳು ಇಲ್ಲಿ ಸಿಗಲಿವೆ. ಹಟ್ಟಿ ಗೋಲ್ಡ್ ಮೈನ್ಸ್  ಕ್ಯಾಂಪಸ್ ‌ನಲ್ಲಿರುವ  ಆಸ್ಪತ್ರೆಯನ್ನು ‌ನವೀಕರಣಗೊಳಿಸಿ ಆಧುನಿಕ ಸೌಲಭ್ಯವನ್ನು ಕಲ್ಪಿಿಸಿಕೊಡುವುದು ಹಾಗೂ ಕ್ಯಾಾಂಪಸ್‌ನಲ್ಲಿ  ಖಾಲಿ ಇರುವ ನಿವೇಶನದಲ್ಲೂ ಈ ಆಸ್ಪತ್ರೆ ನಿರ್ಮಾಣವಾಗಲಿದೆ.

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?

ಹಟ್ಟಿ ಗೋಲ್ಡ್ ಮೈನ್ಸ್  ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಇಂದು (ಬುಧವಾರ) ಭೇಟಿ ನೀಡಿ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿದ ನಂತರ ಅತಿ ಶೀಘ್ರದಲ್ಲೇ ನೂರು ಹಾಸಿಗೆ ಸಾಮರ್ಥ್ಯದ ಸೂಪರ್  ಸ್ಪೆಷಾಲಿಟಿ ಆಸ್ಪತ್ರೆ  ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

ಆಸ್ಪತ್ರೆಯಲ್ಲಿ ಪ್ರತಿಯೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳು, ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳು, ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ಸಿಗುವಂತೆ ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಟ್ಟಿ ಗೋಲ್ಡ್ ಮೈನ್ಸ್ ನಲ್ಲಿ ಪ್ರಸ್ತುತ 5 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿವಾ೯ಹಿಸುತ್ತಿದ್ದು‌ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ‌ನಿರ್ಮಾಣವಾಗಬೇಕೆಂಬುದು ಬಹುದಿನಗಳ ಕನಸಾಗಿತ್ತು.ಸಣ್ಣದೊಂದು ಅವಗಢ ಸಂಭವಿಸಿದರೆ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ
ರಾಯಚೂರು, ಕಲಬುರಗಿ ಇಲ್ಲವೆ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಬೇಕಾಗಿತ್ತು. ಇದರಿಂದ ಕೆಲವು ಸಂದರ್ಭಗಳಲ್ಲಿ ಕಾರ್ಮಿಕರ ಪ್ರಾಾಣಹಾನಿಯೂ ಸಂಭವಿಸುತ್ತಿತ್ತು.

ಈ ಹಿಂದೆ ಹಟ್ಟಿ ಗೋಲ್ಡ್ ಮೈನ್ಸ್ ನ‌ ಕ್ಯಾಂಪಸ್  ನಲ್ಲಿ ‌ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆಂಬ ಬೇಡಿಕೆ ಕೇವಲ ಕಾಗದದಲ್ಲೇ ಉಳಿದಿತ್ತು. ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ನಂತರ ಇಲಾಖೆಗೆ ಹೊಸ ಹೊಸ ಕಾಯಕಲ್ಪ ನೀಡುತ್ತಿರುವ ಮುರುಗೇಶ್ ನಿರಾಣಿ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಕಾರ್ಮಿಕರಿಗಾಗಿಯೇ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ನೀಲ ನಕ್ಷೆ  ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಇದೀಗ ನೀಲ ನಕ್ಷೆ  ಸಿದ್ಧವಾಗಿದ್ದು ಕ್ಯಾಂಪಸ್ ನಲ್ಲಿ ನೂರು ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು  ನಿರ್ಮಿಸಲು ಸಚಿವರು ವಿಶೇಷ ಆಸಕ್ತಿ ತೋರಿದ್ದಾರೆ. 

ಇದಕ್ಕಾಾಗಿ ಹಟ್ಟಿ ಗೋಲ್ಡ್ ಮೈನ್ಸ್ , ಜಿಲ್ಲಾಾ ಖನಿಜ ನಿಧಿ ಹಾಗೂ ಕಾರ್ಮಿಕ ಇಲಾಖೆಯೂ ಕೂಡ ಆರ್ಥಿಕ ನೆರವು ನೀಡಲಿದ್ದು, ಇನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗೆ ಕಾರ್ಮಿಕರಿಗೆ ಅನುಕೂಲವಾಗಲು ತತ್‌ಕ್ಷಣವೇ ಸಿಟಿ ಸ್ಕ್ಯಾನರ್‌ ಗಳನ್ನು  ಖರೀದಿಸಬೇಕೆಂದು ಎಷ್ಟು ಸಾಧ್ಯವೋ ಅಷ್ಟು ಕಟ್ಟಡ ಕಾರ್ಯಾರಂಭವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios