ಬಸವರಾಜ ದಾಸರ ದರ್ಶನ ಅಭಿಮಾನಿಯಾಗಿದ್ದು, ಡಿ ಬಾಸ್ ಆದಷ್ಟು ಬೇಗ ಹೊರಗಡೆ ಬರಲಿ ಎಂದು 10 ಮುಖಬೆಲೆ ನೋಟಿನಲ್ಲಿ ಬರೆದು ತಿರುಪತಿ ಹುಂಡಿಗೆ ಹಾಕಿದ್ದಾರೆ. ಈ ನೋಟಿನ ಫೋಟೋ ವೈರಲ್ ಆಗಿದೆ.

ಕನಕಗಿರಿ(ಜು.03):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಬಿಡುಗಡೆಯಾಗಲೆಂದು ಪ್ರಾರ್ಥಿಸಿ ಅಭಿಮಾನಿಯೊಬ್ಬ ತಿರುಪತಿ ತಿಮ್ಮಪ್ಪನಿಗೆ ಬೇಡಿಕೊಂಡಿದ್ದಾನೆ. 

ಸ್ಥಳೀಯ ನಿವಾಸಿ ಬಸವರಾಜ ದಾಸರ ದರ್ಶನ ಅಭಿಮಾನಿಯಾಗಿದ್ದು, ಡಿ ಬಾಸ್ ಆದಷ್ಟು ಬೇಗ ಹೊರಗಡೆ ಬರಲಿ ಎಂದು 10 ಮುಖಬೆಲೆ ನೋಟಿನಲ್ಲಿ ಬರೆದು ತಿರುಪತಿ ಹುಂಡಿಗೆ ಹಾಕಿದ್ದಾರೆ. ಈ ನೋಟಿನ ಫೋಟೋ ವೈರಲ್ ಆಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್ ನೋಡಲು ಜೈಲಿಗೆ ಎಂಟ್ರಿ ಕೊಟ್ಟ ಆ ಮಹಿಳೆ ಯಾರು..?

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಬಸವರಾಜ ದಾಸರ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಆರೋಪಿಯಾಗಿದ್ದಾರೆ, ಅಪರಾಧಿಯಲ್ಲ. ಒಂದು ವೇಳೆ ಅಪರಾಧಿಯಾಗಿದ್ದರೆ ಶಿಕ್ಷೆಗೊಳಪಡಿಸಲಿ. ಜೈಲಿನಲ್ಲಿ ದರ್ಶನ್‌ ಭೇಟಿಗೆ ನ್ಯಾಯಾಲಯ ಅವಕಾಶ ನೀಡಬೇಕು. "ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ" ಎಂದು 10 ರು. ನೋಟಿನ ಮೇಲೆ ಬರೆದು ತಿರುಪತಿ ತಿಮ್ಮಪ್ಪನ ಹುಂಡಿಗೆ ಅರ್ಪಣೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.