ತುಮಕೂರು (ಆ.17):  ಇದೇ ತಿಂಗಳ 30 ರವರೆಗೆ ನಂದಿನ ಸಿಹಿ ಉತ್ಪನ್ನಗಳ ಬೆಲೆ ಮೇಲೆ ಶೇ. 10 ರಷ್ಟುರಿಯಾಯಿತಿ ನೀಡಲಾಗುತ್ತಿದ್ದು ಗ್ರಾಹಕರು ಹಾಲು ಒಕ್ಕೂಟದ ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತುಮುಲ್‌ ಅಧ್ಯಕ್ಷ ಮಹಲಿಂಗಪ್ಪ ತಿಳಿಸಿದರು.

"

ತುಮಕೂರಿನಲ್ಲಿ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗೌರಿ, ಗಣೇಶ ಹಬ್ಬಕ್ಕೆ ಕೆಎಂಎಫ್‌ ನಿಂದ ಬಂಪರ್‌ ಕೊಡುಗೆ...

ಕೊರೋನಾ ಮಹಾಮಾರಿ ಕಾಣಿಸಿಕೊಂಡ ನಂತರ ಹಾಲು ಶೇಖರಣೆಯ ಪ್ರಮಾಣ ಜಾಸ್ತಿಯಾಗುತ್ತಿದೆ. ಆದರೆ ಮಾರಾಟ ಪ್ರಮಾಣ ಕಡಿಮೆಯಾಗಿದೆ. ಆದರೂ ಹಾಲು ಒಕ್ಕೂಟ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದು, ದರದಲ್ಲಿ ವ್ಯತ್ಯಾಸ ಮಾಡಿಲ್ಲ ಎಂದರು.

ತುಮುಲ್‌ ಒಕ್ಕೂಟವು ಹಾಲು ಉತ್ಪಾದಕ ರೈತರ ಹಿತ ಕಾಯಲು ಬದ್ಧವಾಗಿದೆ. ಹಾಲು ಉತ್ಪಾದಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕೊರೋನಾ ಮಹಾಮಾರಿಯ ಕೆಂಗಣ್ಣಿನಿಂದ ದೂರವೇ ಇರಬೇಕು ಎಂದು ಸಲಹೆ ಮಾಡಿದರು.

ರಾಮ ಮಂದಿರ ಭೂಮಿ ಪೂಜೆ: ಲಡ್ಡು ತಯಾರಿಕೆ ಉಸ್ತುವಾರಿ ಕನ್ನಡಿಗ...

ಕೊರೋನಾ ಮಹಾಮಾರಿಯ ಆರ್ಭಟವನ್ನು ತಗ್ಗಿಸಲು ರೈತರು ಸೇರಿದಂತೆ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಈಗಾಗಲೇ ಒಕ್ಕೂಟದ ವತಿಯಿಂದ ಹೈನುಗಾರರಿಗೆ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.

ತುಮುಲ್‌ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್‌ಭಟ್‌ ಮಾತನಾಡಿ, ಇಡೀ ವಿಶ್ವವೇ ಕೊರೊನಾ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಇಂಥ ಸಂದರ್ಭದಲ್ಲಿ ನಾವು-ನೀವೆಲ್ಲಾ ಜಾಗರೂಕತೆಯಿಂದ ಇರಬೇಕಾಗಿದೆ. ಇದರ ಜತೆಯಲ್ಲೆ ಹೈನುಗಾರರ ಹಿತವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ನಂದಿನಿ ಸಿಹಿ ಉತ್ಪನ್ನಗಳ ಬೆಲೆಯ ಮೇಲೆ ಶೇ. 10 ರಷ್ಟುರಿಯಾಯ್ತಿ ನೀಡುತ್ತಿದ್ದು, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.