ಭಟ್ಕಳದಲ್ಲಿ ಒಂದೇ ಕುಟುಂಬದ 10 ಜನರಿಗೆ ಸೋಂಕು..!

ಭಟ್ಕಳದಲ್ಲಿ ಶುಕ್ರವಾರ 12 ಜನರಿಗೆ ಕೋವಿಡ್‌-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಒಂದೇ ಕುಟುಂಬದ ಎಲ್ಲ 10 ಜನರು ಸೋಂಕಿಗೊಳಗಾಗಿದ್ದಾರೆ. ಇವರ ಸಂಪರ್ಕಕ್ಕೆ ಒಳಗಾದ 52 ಜನರ ಗಂಟಲ ದ್ರವದ ಪರೀಕ್ಷಾ ವರದಿ ಶನಿವಾರ ಬರಲಿದೆ.

 

10 members of same family in bhatkal

ಕಾರವಾರ(ಮೇ 09): ಭಟ್ಕಳದಲ್ಲಿ ಶುಕ್ರವಾರ 12 ಜನರಿಗೆ ಕೋವಿಡ್‌-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಒಂದೇ ಕುಟುಂಬದ ಎಲ್ಲ 10 ಜನರು ಸೋಂಕಿಗೊಳಗಾಗಿದ್ದಾರೆ. ಇವರ ಸಂಪರ್ಕಕ್ಕೆ ಒಳಗಾದ 52 ಜನರ ಗಂಟಲ ದ್ರವದ ಪರೀಕ್ಷಾ ವರದಿ ಶನಿವಾರ ಬರಲಿದೆ.

ಮೇ 6ರಂದು ಸೋಂಕು ಖಚಿತಪಟ್ಟಯುವತಿ (ಪಿ. 659) ಕುಟುಂಬದ ಎಲ್ಲ 10 ಜನರು, ಪಕ್ಕದ ಮನೆಯ ಒಬ್ಬರು ಹಾಗೂ ಆಕೆಯ ಆತ್ಮೀಯ ಗೆಳತಿ ಸೋಂಕಿಗೆ ಒಳಗಾಗಿದ್ದಾರೆ.

Fact Check: ಲಾಕ್‌ಡೌನ್ ಸಡಿಲಿಕೆ, ಹುಷಾರಾಗಿರಿ, ಕ್ರೈಮ್‌ ಹೆಚ್ಚಳವಾಗುತ್ತದೆ!

ಮೊನ್ನೆ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ 18 ವರ್ಷದ ಭಟ್ಕಳದ ಯುವತಿಯ ಅಕ್ಕ, ಭಾವ ಹಾಗೂ ಅವರ 5 ತಿಂಗಳ ಮಗು ಏ. 20ರಂದು ಮಂಗಳೂರು ಪಡೀಲ್‌ ನಲ್ಲಿರುವ ಫಸ್ವ್‌ ನ್ಯೂರೋ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ 5ರಿಂದ 6 ಗಂಟೆಗಳ ಕಾಲ ನರದ ಬಗ್ಗೆ ಮಗುವಿಗೆ ಚಿಕಿತ್ಸೆ ಕೊಡಿಸಿ ಮರಳಿದ್ದರು. ಮೇ 6ರಂದು ಆಸ್ಪತ್ರೆಗೆ ಹೋದ ಕುಟುಂಬದ ಯುವತಿಯಲ್ಲಿ ಸೋಂಕು ಕಾಣಿಸಿತು. ನಂತರ ಕುಟುಂಬದ ಎಲ್ಲ 10 ಜನರೂ ಸೇರಿ ಪ್ರಾಥಮಿಕ ಸಂಪರ್ಕಕ್ಕೆ ಬಂದ ಒಟ್ಟು 19 ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 12 ಜನರ ವರದಿ ಪಾಸಿಟಿವ್‌ ಬಂದಿದೆ. ಇವರ ದ್ವಿತೀಯ ಸಂಪರ್ಕಕ್ಕೆ ಬಂದ 52 ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶನಿವಾರ ವರದಿ ಲಭ್ಯವಾಗಲಿದೆ.

ಪೊಲೀಸ್‌ ಅಧಿಕಾರಿಗಳ ಮುಸುಕಿನ ಗುದ್ದಾಟ: ಜನರಿಗೆ ಹಿಡಿ ಮರಳೂ ಸಿಗ್ತಿಲ್ಲ!

ಯುವತಿಯ ಕುಟುಂಬದ 5 ತಿಂಗಳ ಮಗು, 83 ವರ್ಷದ ವೃದ್ಧ. 75 ವರ್ಷದ ವೃದ್ಧೆ ಸೇರಿ ಇಡಿ ಕುಟುಂಬದ ಎಲ್ಲ 11 ಜನರೂ ಕೋವಿಡ್‌-19 ಸೋಂಕಿಗೊಳಗಾದಂತಾಗಿದೆ. ಆದರೆ ಎಲ್ಲರೂ ಆರೋಗ್ಯದಿಂದ ಇದ್ದಾರೆ. ಕೆಲವರು ಸೋಂಕಿಗೊಳಗಾಗಿ 17 ದಿನಗಳಾಗಿರುವುದರಿಂದ ರೋಗ ಕಡಿಮೆಯಾಗಿರುವ ಸಾಧ್ಯತೆಯೂ ಇದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್‌ ಕೆ. ತಿಳಿಸಿದ್ದಾರೆ.

ಎಲ್ಲ 12 ಸೋಂಕಿತರನ್ನೂ ಕಾರವಾರದ ಮೆಡಿಕಲ್‌ ಕಾಲೇಜು ವಾರ್ಡಿಗೆ ಕರೆತರಲಾಗುತ್ತಿದೆ. ಭಟ್ಕಳದಲ್ಲಿ ಏ. 14ರಂದು 11ನೇ ಪ್ರಕರಣ ದಾಖಲಾಗಿತ್ತು. ಎಲ್ಲ 11 ಸೋಂಕಿತರೂ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ನಂತರ ಮೇ 6ರಂದು ಯುವತಿಯಲ್ಲಿ ಪತ್ತೆಯಾಯಿತು. ಶುಕ್ರವಾರ ಮತ್ತೆ 12 ಜನರಲ್ಲಿ ಸೋಂಕು ಖಚಿತಪಟ್ಟಿದೆ. ಇದರಿಂದ ಈಗ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಂತಾಗಿದೆ. ಉತ್ತರ ಕನ್ನಡದಲ್ಲಿ ಇದುವರೆಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡವರ ಸಂಖ್ಯೆ ಒಟ್ಟೂ24ಕ್ಕೆ ಏರಿದೆ.

Latest Videos
Follow Us:
Download App:
  • android
  • ios