ಕಾರ್ಕಳ ಕ್ವಾರಂಟೈನ್ ಕೇಂದ್ರದಲ್ಲಿ 10 ಮಂದಿ ದಾಖಲು
ಪುರಸಭೆ ವ್ಯಾಪ್ತಿಯ ಭುವನೇಂದ್ರ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಸಿದ್ದಪಡಿಸಿದ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಒಟ್ಟು 10ಮಂದಿ ದಾಖಲಾಗಿರುವುದು ತಿಳಿದು ಬಂದಿದೆ.
ಕಾರ್ಕಳ(ಮೇ.01): ಪುರಸಭೆ ವ್ಯಾಪ್ತಿಯ ಭುವನೇಂದ್ರ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಸಿದ್ದಪಡಿಸಿದ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಒಟ್ಟು 10ಮಂದಿ ದಾಖಲಾಗಿರುವುದು ತಿಳಿದು ಬಂದಿದೆ.
ಮಂಗಳ ಕ್ರೀಡಾಂಗಣ ಬಳಿ ಇರುವ ಭುವನೇಂದ್ರ ರೆಸಿಡೆನ್ಸಿ ಶಾಲೆಯ ಕೇಂದ್ರದಲ್ಲಿ 2 ಮಂದಿ ಹಾಗೂ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ 5 ಮತ್ತು ಐಸೋಲೇಷನ್ ವಾರ್ಡನಲ್ಲಿ 3 ಮಂದಿ ದಾಖಲಿಸಲಾಗಿದೆ.
11 ಮಂದಿಗೆ ವೈರಸ್: ರಾಜ್ಯಕ್ಕೆ ಮತ್ತೆ ತಬ್ಲೀಘಿ ಸಂಕಷ್ಟ
ಅಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ 27 ಮಂದಿ, ನಂದಳಿಕೆ ಗ್ರಾಮದ 16 ಮಂದಿ ಸೇರಿಸಿ ಒಟ್ಟು ತಾಲೂಕಿನಲ್ಲಿ 75ಕ್ಕೂ ಅಧಿಕ ಮಂದಿ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
ತಂದೆಯ ಅಂತಿಮ ಸಂಸ್ಕಾರಕ್ಕಾಗಿ ಬೆಂಗಳೂರು, ಮುಂಬೈಯಿಂದ ನಂದಳಿಕೆ ಗ್ರಾಮಕ್ಕೆ ಆಗಮಿಸಿದ ಇಬ್ಬರು ಮಕ್ಕಳು ಸಹಿತ ಒಂದೇ ಕುಟುಂಬದ 5 ಮಂದಿ ಹಾಗೂ ಕುಟುಂಬದ ಸದಸ್ಯರನ್ನು ಹೋಂ ಕ್ವಾರಂಟೈನ್‌ನಲ್ಲಿರುವಂತೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.
ಇಂದಿನಿಂದ ಮಾಸ್ಕ್ ಧರಿಸದಿದ್ದರೆ 1000 ರು. ದಂಡ!
ಬಾಗಲಕೋಟೆಯಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳಕ್ಕೆ ಆಗಮಿಸಿದ ಮೂವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಇವರು ಬಾಗಲಕೋಟೆಯಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳಕ್ಕೆ ನಡೆದುಕೊಂಡೇ ಬಂದಿರುವುದಾಗಿ ತಿಳಿಸಿದ್ದಾರೆ.
ಮುಂಬೈಯಿಂದ ಮೃತದೇಹ ತಂದವರು ಮೇಲೂ ನಿಗಾ: ಮೂಲತ ಕಾರ್ಕಳ ಅಜೆಕಾರು ನಿವಾಸಿ ಮಹಾಬಲ ಶೆಟ್ಟಿಎಂಬವರು ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು. ಕುಟುಂಬದ ಸದಸ್ಯರು ಸೇರಿ ಅವರ ಮೃತದೇಹವನ್ನು ಮುಂಬೈಯಿಂದ ಆಂಬುಲೆನ್ಸ್ ಮೂಲಕ ಏ. 29ರ ಮುಂಜಾನೆ ಅಜೆಕಾರಿಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಿದ್ದರು. ಈ ವೇಳೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 6 ಮಂದಿಯನ್ನು ಇದೀಗ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್! ಯಾವ ವಾಹನಕ್ಕೆಷ್ಟು ದಂಡ..?
ಅನ್ಯಜಿಲ್ಲೆಯಿಂದ ಆಗಮಿಸಿದವರಿಗೂ ಕ್ವಾರಂಟೈನ್: ಶಿವಮೊಗ್ಗದಿಂದ ನಂದಳಿಕೆಗೆ ಆಗಮಿಸಿದ ಓರ್ವ, ಬೆಂಗಳೂರಿನಿಂದ ಆಗಮಿಸಿದ 5 ಮಂದಿ, ಹಾಸನದಿಂದ ಆಗಮಿಸಿದ 5 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಕದ್ದು ಮುಚ್ಚಿ ಮದುವೆಗೆ ಹೋದವರಿಗೂ ಕ್ವಾರಂಟೈನ್: ಕಾರ್ಕಳ ಅಜೆಕಾರು ಕೈಕಂಬ ಸಮೀಪದ ನಿವಾಸಿಯೊಬ್ಬರ ಸಂಬಂಧಿಕರ ಮದುವೆ ಕಾರ್ಯಕ್ರಮ ಮಂಗಳೂರಿನಲ್ಲಿ ಗೊತ್ತುಪಡಿಸಲಾಗಿದ್ದು ಈ ಮದುವೆ ಕಾರ್ಯಕ್ರಮಕ್ಕೆ ತಮ್ಮ ಕುಟುಂಬದ ಸದಸ್ಯರು ಸೇರಿ ಯಾರಿಗೂ ತಿಳಿಯದಂತೆ ಮಂಗಳೂರಿಗೆ ತೆರಳಿದ್ದರು. ಅಧಿಕಾರಿಗಳು ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ.