ಮನ್ಮುಲ್ಗೆ 1 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ: ಸಚಿವ ಎಸ್.ಟಿ.ಸೋಮಶೇಖರ್
ಮೆಗಾಡೇರಿ ಸ್ಥಾಪನೆಯಿಂದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮದ್ದೂರು (ಡಿ.31): ಮೆಗಾಡೇರಿ ಸ್ಥಾಪನೆಯಿಂದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ತಾಲೂಕಿನ ಗೆಜ್ಜಲಗೆರೆ ಮನ್‌ಮುಲ್ ಆವರಣದಲ್ಲಿ ಮೆಗಾ ಡೇರಿಯಲ್ಲಿ ಹಾಲಿನ ಪುಡಿ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮೆಗಾ ಡೇರಿಯಲ್ಲಿ 30 ಮೆಟ್ರಿಕ್ ಟನ್ ಹಾಲು ಪುಡಿ ಘಟಕ, 2 ಮೆಟ್ರಿಕ್ ಟನ್ ಪನ್ನಿರ್, 10 ಮೆಟ್ರಿಕ್ ಬೆಣ್ಣೆ ಹಾಗೂ 10 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಮೆಗಾ ಡೇರಿ ಹೊಂದಿದೆ ಎಂದರು.
ಅಲ್ಲದೇ, 12 ಮೆಟ್ರಿಕ್ ಟನ್ ತುಪ್ಪ, 4 ಮೆಟ್ರಿಕ್ ಟನ್ ಕೋವಾ ಜೊತೆಗೆ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವಿದೆ. ಇದನ್ನು ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ವಿಸ್ತರಣೆ ಮಾಡಿಕೊಳ್ಳುವ ಅವಕಾಶವಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹೆಚ್ಚಿನ ಅನುದಾನ ಕೊಟ್ಟು ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ರಾಜ್ಯದ 15 ಹಾಲು ಒಕ್ಕೂಟಗಳಲ್ಲಿ 100 ಕೋಟಿ ವಹಿವಾಟು ಮಾಡುವ ಸಾಮರ್ಥ್ಯಕ್ಕೆ ಮುಖ್ಯಮಂತ್ರಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕೆಜಿಎಫ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಶಾಸಕಿ ರೂಪಕಲಾ ಶಶಿಧರ್
ದಿವ್ಯ ಸಾನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ದೇಶದಲ್ಲಿ ಶೇ.65ರಷ್ಟುಮಂದಿ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಕೃಷಿಕರ ಬದುಕು ಹಸನಾಗಿಸಲು ಸರ್ಕಾರಗಳು ಶ್ರಮಿಸಬೇಕು. ರೈತರಿಗೆ ಮತ್ತಷ್ಟುಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಕಳೆದ ಒಂದು ವಾರವಷ್ಟೇ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ರೈತರ ಎಲ್ಲ ಸಮಸ್ಯೆಗಳ ಪರಿಹರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಚುಂಚಶ್ರೀ ಹೇಳಿದರು.
ನಂದಿನಿ, ಅಮುಲ್ ಒಗ್ಗೂಡಿದರೆ ಕ್ಷೀರಕ್ರಾಂತಿ: ಹೈನೋದ್ಯಮದಲ್ಲಿ ಕರ್ನಾಟಕದ ನಂದಿನಿ ಹಾಗೂ ಗುಜರಾತ್‌ನ ಅಮುಲ್ ಸಂಸ್ಥೆಗಳು ಒಗ್ಗೂಡಿದರೆ ದೇಶದಲ್ಲಿ ಕ್ಷೀರ ಕ್ರಾಂತಿಯೊಂದಿಗೆ ವಿದೇಶಕ್ಕೆ ರಫ್ತು ಮಾಡಲು ಸಹಕಾರಿಯಾಗುತ್ತದೆ ಎಂದು ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ಹೇಳಿದರು. ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದಲ್ಲಿ 260 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೆಗಾ ಡೇರಿ ಘಟಕ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ನಂದಿನಿಯಷ್ಟೇ ಗುಜರಾತ್‌ನ ಅಮುಲ್ ಸಹ ಹೈನೋದ್ಯಮದ ಪ್ರಗತಿಗೆ ಕೊಡುಗೆ ನೀಡಿದೆ. ನಂದಿನಿ ಹಾಗೂ ಅಮುಲ್ ಒಟ್ಟುಗೂಡಿದ್ದಲ್ಲಿ ಹೈನೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಬಹುದು ಎಂದರು.
ಕಳಸಾ ಬಂಡೂರಿ ಯೋಜನೆ ಫಾರೆಸ್ಟ್ ಕ್ಲಿಯರೆನ್ಸ್‌ಗೆ ದೆಹಲಿಗೆ ಹೋಗುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ
1975ರಲ್ಲಿ ಕೇವಲ 66 ಕೆಜಿ ಹಾಲು ಸಂಸ್ಕರಣೆ ಮಾಡುತ್ತಿದ್ದ ನಂದಿನಿ ಇಂದು 82 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡುವುದರೊಂದಿಗೆ ಈ ಭಾಗದ ರೈತರ ಆರ್ಥಿಕ ಹಣೆಬರಹ ಬದಲು ಮಾಡಿದೆ. ಗುಜರಾತ್‌ನ ಅಮುಲ್ ಸಂಸ್ಥೆ ಕ್ಷೀರ ಕ್ರಾಂತಿಯೊಂದಿಗೆ ಇಂದು 36 ಲಕ್ಷ ಮಹಿಳೆಯರ ಖಾತೆಗೆ .66 ಕೋಟಿ ನೇರವಾಗಿ ಖಾತೆಗೆ ಜಮೆ ಮಾಡುತ್ತಿದೆ ಎಂದರು. ಹೀಗಾಗಿ ಕರ್ನಾಟಕದ ಹೈನುಗಾರಿಕೆ ಅಮುಲ್ ಸಂಸ್ಥೆ ಜತೆಗೂಡಿದರೇ ಮುಂದಿನ 3 ವರ್ಷದಲ್ಲಿ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಪ್ರಾಥಮಿಕ ಡೇರಿ ಸ್ಥಾಪಿಸಲು ಆದ್ಯತೆ ನೀಡಲಾಗುವುದು. ಎನ್‌ಡಿಡಿ ಮೂಲಕ ಪ್ರತಿ ಪಂಚಾಯ್ತಿಯಲ್ಲಿ ಪ್ರಾಥಮಿಕ ಡೇರಿ ಸ್ಥಾಪನೆ ಮಾಡಲಾಗುವುದು ಎಂದರು.