ಸಿಮ್ ಖರೀದಿಸಿದ್ರೆ 1 ಕೆಜಿ ಈರುಳ್ಳಿ ಉಚಿತ! ಬಂಪರ್ ಆಫರ್
ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಸಿಮ್ ಖರಿದಿಸಿದ್ರೆ ಒಂದು ಕೆಜಿ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಶಿವಮೊಗ್ಗ [ಡಿ.27]: ಈರುಳ್ಳಿ ದರ ಏರಿಕೆ ಹಲವು ವಿಡಂಬನೆ, ಟ್ರೋಲ್‌ಗಳಿಗೆ ಕಾರಣವಾಗುತ್ತಿರುವ ನಡುವೆಯೇ ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಜಿಯೋ ಸಂಸ್ಥೆಯ ಪ್ರತಿನಿಧಿಗಳು ಪ್ರತಿ ಸಿಮ್‌ಗೆ ತಲಾ 1 ಕೆ.ಜಿ. ಈರುಳ್ಳಿ ಆಫರ್ ನೀಡಿದ್ದು ವಿಶೇಷವಾಗಿತ್ತು.
ಗುರುವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಜಿಯೋ ಸಂಸ್ಥೆಯ ಪ್ರತಿನಿಧಿಗಳು ಅಲ್ಲಿ ತಮ್ಮ ಸಂಸ್ಥೆಯ ತಾತ್ಕಾಲಿಕ್ ಶೆಡ್ ತೆರೆದು ಮಾರಾಟ ಆರಂಭಿಸಿದರು. 300 ರು. ಕರೆನ್ಸಿಯೊಂದಿಗೆ ಸಿಮ್ ಖರೀದಿಸಿದರೆ ಒಂದು ಕೆ.ಜಿ. ಈರುಳ್ಳಿ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಮತ್ತು ಅಕ್ಕಪಕ್ಕದ ನೂರಾರು ಮಂದಿ ಬಂದು ಸಿಮ್ ಖರೀದಿಸಿದರು.
ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...
ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಜಿಯೋ ಸಂಸ್ಥೆ ತನ್ನ ಮೊಬೈಲ್ ಸಿಮ್ ಮಾರಾಟಕ್ಕೆ ಈರುಳ್ಳಿಯನ್ನು ಉಚಿತ ಕೊಡುಗೆಯಾಗಿ ನೀಡುತ್ತಿರುವುದು.