Ghol Fish: ಮಲ್ಪೆ ಬಂದರಿನಲ್ಲಿ 1 ಮೀನು ₹2.23 ಲಕ್ಷಕ್ಕೆ ಮಾರಾಟ!
ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಸೋಮವಾರ ಹರಾಜಿನಲ್ಲಿ ಒಂದು ಮೀನು 2 ಲಕ್ಷ ರು.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ಆಳಸಮುದ್ರ ಮೀನುಗಾರಿಕಾ ಬೋಟಿನ ಬಲೆಯಲ್ಲಿ ಬಿದ್ದ ಈ ಮೀನನ್ನು ಸ್ಥಳೀಯರು ಗೋಲಿ ಮೀನು (ಇಂಗ್ಲೀಷ್ ನಲ್ಲಿ (Ghol Fish) ಎಂದು ಕರೆಯುತ್ತಾರೆ.
ಮಲ್ಪೆ (ಡಿ.28) : ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಸೋಮವಾರ ಹರಾಜಿನಲ್ಲಿ ಒಂದು ಮೀನು 2 ಲಕ್ಷ ರು.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ಆಳಸಮುದ್ರ ಮೀನುಗಾರಿಕಾ ಬೋಟಿನ ಬಲೆಯಲ್ಲಿ ಬಿದ್ದ ಈ ಮೀನನ್ನು ಸ್ಥಳೀಯರು ಗೋಲಿ ಮೀನು (ಇಂಗ್ಲೀಷ್ ನಲ್ಲಿ (Ghol Fish) ಎಂದು ಕರೆಯುತ್ತಾರೆ. ಇದು ಬಹಳ ರುಚಿಕರ ಮತ್ತು ತೀರಾ ಅಪರೂಪವಾಗಿರುವುದರಿಂದ ಇದಕ್ಕೆ ಮೀನು ಪ್ರಿಯರಿಂದ ಭಾರಿ ಬೇಡಿಕೆ ಇದೆ. ಹೆಚ್ಚು ಬೆಲೆಗೆ ಇದನ್ನು ವಿದೇಶಗಳಿಗೆ ರಪ್ತು ಮಾಡಲಾಗುತ್ತದೆ. ಜೊತೆಗೆ ಇದು ಔಷಧೀಯ ಗುಣಗಳನ್ನು ಹೊಂದಿದೆ ಎಂದೂ ಎಂದು ಹೇಳಲಾಗುತ್ತಿದೆ.
ಸುಮಾರು 22 ಕೆ.ಜಿ. ತೂಕವಿದ್ದ ಈ ಮೀನನ್ನು ಏಜೆಂಟರೊಬ್ಬರು ಕೆ.ಜಿ.ಗೆ 10,640 ರು.ಗಳಂತೆ ಬರೋಬ್ಬರಿ 2,34,080 ರು.ಗೆ ಖರೀದಿಸಿದರು. ಮಲ್ಪೆ ಬಂದರಿನಲ್ಲಿ ಇಷ್ಟುಬೆಲೆಗೆ ಮೀನೊಂದು ಮಾರಾಟವಾಗುವುದು ಇದೇ ಪ್ರಥಮವಾಗಿದೆ. ಈ ಹಿಂದೆ ಮಲ್ಪೆಯಲ್ಲಿ 20 ಕೆ.ಜಿ. ವರೆಗಿನ ಗೋಲಿ ಮೀನುಗಳು ಸಿಕ್ಕಿವೆ. ಅವು 1.8 ಲಕ್ಷ ರುಪಾಯಿಗೆ ಮಾರಾಟವಾಗಿವೆ. ವಿದೇಶಗಳಲ್ಲಿ ಈ ಮೀನಿನ ಪುಪ್ಪುಸದಿಂದ ಸೌಂದರ್ಯ ಪ್ರಸಾದನಗಳನ್ನು ತಯಾರಿಸುತ್ತಾರೆ.
ಎಷ್ಟು ಚೆಂದ.. ಮೀನುಗಾರನ ಬಲೆಗೆ ಬಿದ್ದ ಭಾರಿ ಗಾತ್ರದ ಗೋಲ್ಡ್ ಫಿಶ್
ಇದು ಬಹಳ ಪೌಷ್ಟಿಕಾಂಶಗಳನ್ನೂ ಹೊಂದಿದ್ದು, ಆರೋಗ್ಯಕ್ಕೆ ಬಹಳ ಶ್ರೇಷ್ಟಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಮ್ಮ ದೇಶದಲ್ಲಿ ಈ ಮೀನುಗಳು ಸಿಕ್ಕಿದರೆ ವಿದೇಶಕ್ಕೆ ರಫ್ತು ಆಗುತ್ತವೆ. ಆದ್ದರಿಂದ ಈ ಮೀನಿಗೆ ಇಷ್ಟುದುಬಾರಿ ಬೆಲೆ ಇದೆ. ಜೀವಶಾಸ್ತ್ರದಲ್ಲಿ ಇದನ್ನು ಪ್ರೊಟೊನಿಬಿಯಾ ಡಯಕಂತಸ್ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸಾಗರ ಜೀವಿಶಾಸ್ತ್ರ ತಜ್ಞ ಡಾ.ಶಿವಕುಮಾರ್ ಹರಗಿ.
ಇಂಡೋಫೆಸಿಫಿಕ್ ಸಾಗರದಲ್ಲಿ ವಾಸಿಸುವ ಈ ಮೀನುಗಳು ಸಾಧಾರಣವಾಗಿ ಮಹಾರಾಷ್ಟ್ರ, ಗುಜರಾತ್ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಅಲ್ಲಿ ಗುಂಪುಗುಂಪಾಗಿ ಮೀನುಗಳು ಬಲೆಗೆ ಬಿದ್ದು ಮೀನುಗಾರರು ರಾತ್ರೋರಾತ್ರಿ ಕುಬೇರರಾದ ಉದಾಹರಣೆಗಳಿವೆ ಎನ್ನುತ್ತಾರೆ ಡಾ.ಹರಗಿ.
Dangerous! ಇವು ಪ್ರಪಂಚದ 15 ಅತ್ಯಂತ ಅಪಾಯಕಾರಿ ಪ್ರಾಣಿಗಳು