ಬೆಂಗಳೂರು(ಜು.12): ಕಳೆದೊಂದು ತಿಂಗಳಲ್ಲಿ ನಗರದ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ 50 ಸಾವಿರ ಮಂದಿಗೆ ಬಿಬಿಎಂಪಿ ಮಾರ್ಷಲ್‌ಗಳು 1.01 ಕೋಟಿ ರು. ದಂಡ ವಿಧಿಸಿದ್ದಾರೆ.

ಜೂ.9ರಿಂದ ಜು.10ರ ವರೆಗೆ ಮಾರುಕಟ್ಟೆ, ಬಸ್‌ ನಿಲ್ದಾಣ, ರಸ್ತೆ, ಪಾರ್ಕ್ ಸೇರಿದಂತೆ ಇನ್ನಿತರ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿಯಿಂದ ನಡೆದುಕೊಂಡ 50,706 ಮಂದಿಯಿಂದ ತಲಾ 200 ರು.ನಂತೆ .1.01 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಅರ್ಧಕ್ಕರ್ಧ ಬೆಂಗ್ಳೂರು ಸೀಲ್‌ಡೌನ್‌ ಸಾಧ್ಯತೆ..!

ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ ಮತ್ತು ಕಸ ವಿಂಗಡಣೆ ಮಾಡದ 149 ಅಂಗಡಿ ಮುಂಗಟ್ಟುಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿನಿಂದ ರ‍್ಯಾಂಡಮ್ ಟೆಸ್ಟ್

ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಭಾನುವಾರದಿಂದ ನಗರದಲ್ಲಿ ರಾರ‍ಯಂಡಮ್‌ ಟೆಸ್ಟ್‌ ಪ್ರಾರಂಭಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಪಾಲಿಕೆಗೆ ಒಟ್ಟು 50 ಸಾವಿರ ರಾರ‍ಯಪಿಡ್‌ ಕಿಟ್‌ಗಳನ್ನು ಸರ್ಕಾರ ಮಂಜೂರು ಮಾಡಿದೆ. ಇವುಗಳ ಮೂಲಕ ನಗರದಲ್ಲಿ ರಾರ‍ಯಂಡಮ್‌ ಟೆಸ್ಟ್‌ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.