ಬೆಂಗಳೂರು(ಜು.12): ಸಿಲಿಕಾನ್‌ ಸಿಟಿ ಕೊರೋನಾ ಹಾಟ್‌ಸ್ಪಾಟ್‌ ಆಗಿ ಮಾರ್ಪಡುತ್ತಿದ್ದು, ನಗರದಲ್ಲಿ ಸೀಲ್‌ಡೌನ್‌ ಪ್ರದೇಶಗಳು ಸಂಖ್ಯೆ ಹೆಚ್ಚಾಗುತ್ತಿವೆ. ಒಂದು ಅಂದಾಜು ಪ್ರಕಾರ ಸರಿಸುಮಾರು ಶೇ.50ರಷ್ಟುಪ್ರದೇಶಗಳು ಸೀಲ್‌ಡೌನ್‌ ಆಗಲಿವೆ ಎಂದು ಹೇಳಲಾಗಿದೆ.

ಶುಕ್ರವಾರ ಬಿಬಿಎಂಪಿ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ಪಾಲಿಕೆ ವ್ಯಾಪ್ತಿಯ ಒಟ್ಟು 198 ವಾರ್ಡ್‌ಗಳಲ್ಲಿ 197 ವಾರ್ಡ್‌ಗಳಲ್ಲಿನ ಜನರಿಗೆ ಕೊರೋನಾ ಸೋಂಕು ತಗುಲಿರುವುದನ್ನು ಖಚಿತ ಪಡಿಸಿದೆ.

ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ, ಹಾಗಾಗಿ ಸುರೇಶ್ ಕುಮಾರ್ ಹೊಸ ಪರಿಹಾರ

ಹೀಗಾಗಿ ಸೋಂಕಿತರು ಇದ್ದ ಮನೆ ಅಥವಾ ಇಡೀ ರಸ್ತೆಯನ್ನೇ ಸೀಲ್‌ಡೌನ್‌ ಮಾಡಲಾಗಿದೆ. ನಗರದ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 15 ರಿಂದ 20 ಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಬಿಬಿಎಂಪಿಯಿಂದ ಶುಕ್ರವಾರ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ನಗರದಲ್ಲಿ ಒಟ್ಟು 3,181 ಕಂಟೈನ್ಮೆಂಟ್‌ ಜೋನ್‌ಗಳನ್ನು ಗುರುತಿಸಲಾಗಿದೆ.

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಒಂದು ವಾರ ಲಾಕ್‌ಡೌನ್‌ ಘೋಷಣೆಯಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೂ ಈ ಲಾಕ್‌ಡೌನ್‌ ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿಯವರು ಸೋಮವಾರ ಜಿಲ್ಲಾಧಿಕಾರಿಗಳ ಸಭೆಯ ನಂತರ ತೀರ್ಮಾನ ಕೈಗೊಳ್ಳಲಿದ್ದಾರೆ.