ರಾಜ್ಯದಲ್ಲಿ1,55,927 ಕುಟುಂಬಕ್ಕೆ ಸಿಗಲಿವೆ ಆದ್ಯತಾ ಪಡಿತರ ಚೀಟಿ
.1,55,927 ಕುಟುಂಬಕ್ಕೆ ಸಿಗಲಿವೆ ಆದ್ಯತಾ ಪಡಿತರ ಚೀಟಿ
ಹಿರಿತನದ ಆಧಾರದ ಮೇಲೆ ಪಡಿತರ ಚೀಟಿ ವಿತರಣೆಗೆ ಆದೇಶ
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಡಿ. 02): ರಾಜ್ಯದಲ್ಲಿ ಹೊಸದಾಗಿ ಆಧ್ಯತಾ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿರುವ ಬಡ ಕುಟುಂಬಗಳಿಗೆ ಅಂತೂ ಇಂತೂ ಆದ್ಯತಾ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಿಲ್ ಕೊಟ್ಟಿದೆ.
ಹೌದು, ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ 2022 ಆಗಸ್ಟ್ 25 ರ ವರೆಗೂ ಆಧ್ಯತಾ ಪಡಿತರ ಚೀಟಿಗಾಗಿ (Ration Card) ರಾಜ್ಯಾದ್ಯಂತ ಅರ್ಜಿ ಸಲ್ಲಿಸಿರುವ ಬರೊಬ್ಬರಿ 2,73,662 ಅರ್ಜಿಗಳ ಪೈಕಿ ವಿಲೇವಾರಿಗೆ ಅರ್ಹ ಇರುವ ಒಟ್ಟು 1,55,927 ಮಂದಿ ಅರ್ಜಿದಾರರಿಗೆ ಹೊಸದಾಗಿ ಆದ್ಯತಾ ಪಡಿತರ ಚೀಟಿ ವಿತರಿಸಲು ಸರ್ಕಾರ ರಾಜ್ಯದ (Karnataka) ಎಲ್ಲಾ ಜಿಲ್ಲಾಡಳಿಗಳಿಗೆ ಆದೇಶಿಸಿದೆ.
ಅರ್ಹರಿಗೆ ಮಾತ್ರ ವಿತರಿಸಿ
ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗೆ 2017-18 ರಿಂದ 2021-22ನೇ ಸಾಲಿನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದು ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಅರ್ಜಿಗಳ ಹಿರಿತನದ ಆಧಾರದ ಮೇಲೆ ಅಂದರೆ 2017-18ನೇ ಸಾಲಿನ ಸಲ್ಲಿಕೆ ಆಗಿರುವ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚಿಸಿದೆ. ಜೊತೆಗೆ ಅರ್ನಹರಿಗೆ ಯಾವುದೇ ರೀತಿ ಆದ್ಯತಾ ಚೀಟಿ ವಿತರಿಸದೇ ಅರ್ಹ ಕುಟುಂಬಗಳಿಗೆ ವಿತರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಪ್ರಥಮ ಆದ್ಯತೆಯಾಗಿ ತೀವ್ರ ಆಹಾರ ಅಭದ್ರತೆಗೆ ಒಳಗಾಗಿರುವ ಕುಟುಂಬಗಳು ಮತ್ತು ಇದುವರೆಗೂ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳನ್ನು ಪರಿಗಣಿಸುವಂತೆ ಸರ್ಕಾರ ಸೂಚಿಸಿದೆ. ಅಲ್ಲದೇ ಎರಡನೇ ಆದ್ಯತೆಯಾಗಿ ಮೂಲ ಬುಡಕಟ್ಟು, ಅಲೆಮಾದರಿ ಕುಟುಂಬಗಳು, ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟವರ್ಗಗಳ ಹಾಗೂ ಕಾಡಿನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿ ವಿತರಿಸುವಂತೆ ಸರ್ಕಾರದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಪ್ರತಿ ಅಧಿಕಾರಿ ವಿತರಿಸುವ ಹೊಸ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿಗಳ ಬಗ್ಗೆ ಇಲಾಖೆ ತಂತ್ರಾಂಶದಲ್ಲಿ ಅಥವಾ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ. ಈಗಾಗಲೇ ಆದ್ಯತೇತರ ಪಡಿತರ ಚೀಟಿ ಹೊಂದಿದ್ದು ಆಧ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳನ್ನು ಆದ್ಯತಾ ಕುಟುಂಬಗಳಿಗೆ ಪರಿಗಣಿಸಬಾರದೆಂದು ಸರ್ಕಾರ ಸೂಚಿಸಿದೆ.
ಯಾವ ಜಿಲ್ಲೆಗಳಿಗೆ ಎಷ್ಟು?
ರಾಜ್ಯದಲ್ಲಿ 1,55,927 ಅರ್ಜಿದಾರರಿಗೆ ಆದ್ಯತಾ ಪಡಿತರ ಚೀಟಿ ವಿತರಿಸಲು ಆದೇಶಿಸಿರುವ ಸರ್ಕಾರ ಕಲಬುರಗಿ ಜಿಲ್ಲೆಯಲ್ಲಿ 15,ಮ432, ಬೆಂಗಳೂರು ನಗರ ಜಿಲ್ಲೆಯಲ್ಲಿ 13,532, ವಿಜಪುರದಲ್ಲಿ 10,980, ಬೆಳಗಾವಿಯಲ್ಲಿ 10,874 ಅರ್ಜಿದಾರರಿಗೆ ಆದ್ಯತಾ ಪಡಿತರ ಚೀಟಿ ಸಿಗಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 4,060 ಅರ್ಜಿಗಳು ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ಆ ಪೈಕಿ 2042 ಅರ್ಜಿಗಳ ಸ್ಥಳ ಪರೀಶೀಲಿಸಿರುವ ಆಹಾರ ಇಲಾಖೆ ಅಧಿಕಾರಿಗಳು, ಒಟ್ಟು 1,623 ಅರ್ಜಿಗಳು ಆದ್ಯತಾ ಪಡಿತರ ಚೀಟಿ ವಿತರಿಸಲು ಅರ್ಹವೆಂದು ಗುರುತಿಸಿವೆ.
ಕರಾವಳಿಗರಿಗೆ ಸಂತಸದ ಸುದ್ದಿ
ಉತ್ತರ ಕನ್ನಡ(ನ.10): ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಭಾಗಶಃ ಪ್ರದೇಶಗಳಲ್ಲಿ ಪಡಿತರದಲ್ಲಿ ಕುಚಲಕ್ಕಿ ನೀಡಲು ಮುಖ್ಯಮಂತ್ರಿ ಸಮ್ಮತಿ ನೀಡಿದ್ದಾರೆ. ಕ್ವಿಂಟಾಲ್‌ಗೆ 2540 ರೂ. ನೀಡಿ ಕರಾವಳಿಯ ರೈತರ ಅಕ್ಕಿ ಖರೀದಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಿನ್ನೆ(ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕರಾವಳಿ ಭಾಗಗಳಲ್ಲಿ ಕುಚಲಕ್ಕಿಗೆ ಹೆಚ್ಚು ಬೇಡಿಕೆಯಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಪಡಿತರದಲ್ಲಿ ಕುಚಲಕ್ಕಿ ನೀಡಲು ಪ್ರತಿ ತಿಂಗಳು ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತಿದ್ದು, ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದೆ. ಅದಕ್ಕಾಗಿ 18 ಲಕ್ಷ ಭತ್ತ ಸಂಸ್ಕರಿಸಿಕೊಳ್ಳಬೇಕಾಗಿದೆ. ಇನ್ನೊಂದು ವಾರದ ಬಳಿಕ ರಾಜ್ಯದ ಕರಾವಳಿಯಲ್ಲೂ ಭತ್ತದ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ ಅಂತ ತಿಳಿಸಿದ್ದಾರೆ.
ಬೆಂಬಲ ಬೆಲೆಗಾಗಿ ಕಬ್ಬು ಬೆಳೆಗಾರರ ಹೋರಾಟ: ಬೇಡಿಕೆಯ ಅರ್ಧ ಬೆಲೆ ನಿಗದಿ, ತಪ್ಪದ ಆಕ್ರೋಶ
ಕೇಂದ್ರ, ರಾಜ್ಯ ಸರಕಾರದ ನಿಯಮ ಪ್ರಕಾರ ಭತ್ತ ಖರೀದಿಗೆ ಕ್ವಿಂಟಾಲ್‌ಗೆ 2040 ರೂ. ಇದೆ. ಆದರೆ, ಕೇರಳ ಸರಕಾರ 2250 ರೂ. ದರದಲ್ಲಿ ಕರ್ನಾಟಕದ ಭತ್ತ ಖರೀದಿಸುತ್ತಿದ್ದದ್ದರಿಂದ ರಾಜ್ಯದ ಭತ್ತಗಳು ಕೇರಳದ ಪಾಲಾಗುತ್ತಿತ್ತು. ಈ ಕಾರಣ ರಾಜ್ಯ ಸರಕಾರ ಸಬ್ಸಿಡಿ 500 ರೂ. ಸೇರಿಸಿ ಒಟ್ಟಾರೆ 2540 ರೂ.ಗೆ ಭತ್ತ ಖರೀದಿಸಲು ನಿರ್ಧರಿಸಿದೆ. ತರಾತುರಿಗೆ ಭತ್ತ ಮಾರುವ ಬದಲು ಉತ್ತಮ ದರಕ್ಕೆ ನಾವು ಖರೀದಿಸುತ್ತೇವೆ. ರೈತರು ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕು ಎಂದು ಸಚಿವರು ತಿಳಿಸಿದ್ದಾರೆ.