ಬೆಂಗಳೂರು-ಮೈಸೂರು ಹೆದ್ದಾರಿ: ಎರಡೇ ದಿನದಲ್ಲಿ 1.50 ಲಕ್ಷ ರು. ದಂಡ ವಸೂಲಿ

ಸಂಚಾರಿ ಠಾಣಿಯ ಪಿಎಸ್‌ಐ ಮಹೇಶ್‌ ಹಾಗೂ ಕಾಮಾಕ್ಷಿ ಸೇರಿದಂತೆ ಠಾಣಿಯ ಸಿಬ್ಬಂದಿ 2 ದಿನಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿ ಎಕ್ಸ್‌ಪ್ರೆಸ್‌ ವೇನಲ್ಲಿ ಅತೀ ವೇಗವಾಗಿ ಸಂಚರಿಸಿದ 150 ವಾಹನ ಚಾಲಕರಿಂದ ತಲಾ 1000 ರು.ನಂತೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ತಲಾ 500 ರು. ದಂಡ ವಿಧಿಸಿದ್ದಾರೆ.

1.50 lakhs Fine Collection in two days in Bengaluru Mysuru Expressway in Mandya grg

ಮದ್ದೂರು(ಆ.23):  ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಮೀತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡಿದ ಚಾಲಕರು ಸೇರಿದಂತೆ ಕೆಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಮದ್ದೂರು ಸಂಚಾರಿ ಪೊಲೀಸರು 1.50 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ.

ಸಂಚಾರಿ ಠಾಣಿಯ ಪಿಎಸ್‌ಐ ಮಹೇಶ್‌ ಹಾಗೂ ಕಾಮಾಕ್ಷಿ ಸೇರಿದಂತೆ ಠಾಣಿಯ ಸಿಬ್ಬಂದಿ 2 ದಿನಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿ ಎಕ್ಸ್‌ಪ್ರೆಸ್‌ ವೇನಲ್ಲಿ ಅತೀ ವೇಗವಾಗಿ ಸಂಚರಿಸಿದ 150 ವಾಹನ ಚಾಲಕರಿಂದ ತಲಾ 1000 ರು.ನಂತೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ತಲಾ 500 ರು. ದಂಡ ವಿಧಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರೀಲಿ ಅಪಘಾತ ಬಳಿಕ ಈಗ ದರೋಡೆ ಹಾವಳಿ..!

ಲೇನ್‌ ಡಿಸಿಪ್ಲೀನ್‌, ಸೀಟ್‌ ಬೆಲ್ಟ… ಧರಿಸದೆ ಸಂಚಾರ ನಿಯಮ ಉಲ್ಲಂಘನೆ ಹಾಗೂ ಎಕ್ಸ್‌ಪ್ರೇಸ್‌ನಲ್ಲಿ ಸಂಚಾರ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ 8 ದ್ವಿಚಕ್ರ ವಾಹನ ಚಾಲಕರಿಂದ ಪ್ರಕರಣ ದಾಖಲಿಸಿ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರು-ಮೈಸೂರು ವೇಹೆದ್ದಾರಿಯಲ್ಲಿ ರಾತ್ರಿ ವೇಳೆ ರಸ್ತೆ ಬದಿ ನಿಲ್ಲುವ ವಾಹನ ಚಾಲಕರಿಗೆ ಕೆಲವು ದುಷ್ಕರ್ಮಿಗಳು ಬೆದರಿಕೆ ಹಾಕಿ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿರುವ ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿ ಗಸ್ತನ್ನು ಬಿಗಿಗೊಳಿಸಿದ್ದಾರೆ. ಹೀಗಾಗಿ ವಾಹನಗಳ ಮಾಲೀಕರು ರಾತ್ರಿ ವೇಳೆ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios