ಸರ್ಕಾರ ರಚನೆಗೆ ಮನಸ್ತಾಪ ಮರೆತ ಜಮೀರ್ - ಎಚ್.ಡಿ.ಕೆ

Zameer Ahmed Khan reacts on Congress-JDS Alliance
Highlights

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಾಸಕ ಜಮೀರ್ ಅಹಮದ್ ಅವರು ಮನಸ್ತಾಪ ಮರೆತು ಮೊದಲ ಬಾರಿಗೆ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದಾರೆ. ಇನ್ನು ಕುಮಾರಸ್ವಾಮಿ ಅವರೊಂದಿಗಿನ ಮನಸ್ತಾಪದ  ಬಗ್ಗೆಯೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಂಗಳೂರು :  ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಾಸಕ ಜಮೀರ್ ಅಹಮದ್ ಅವರು ಮನಸ್ತಾಪ ಮರೆತು ಮೊದಲ ಬಾರಿಗೆ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದಾರೆ. ಇನ್ನು ಕುಮಾರಸ್ವಾಮಿ ಅವರೊಂದಿಗಿನ ಮನಸ್ತಾಪದ  ಬಗ್ಗೆಯೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಎರಡೂವರೆ ವರ್ಷವಾಗಿತ್ತು. ಇಂದು ಅವರೊಂದಿಗಿನ ಮಾತುಕತೆ ತಮಗೆ ಖುಷಿಯನ್ನು ತಂದಿದೆ ಎಂದು ಹೇಳಿದ್ದಾರೆ. 

ರಾಜಕೀಯದಲ್ಲಿ  ತಾವು ಅವರನ್ನು ಸಾಕಷ್ಟು ವಿರೋಧ ಮಾಡಿದ್ದು, ಅವರೂ ಕೂಡ ತಮನ್ನು ವಿರೋಧ ಮಾಡಿದ್ದರು. ಆದರೆ ಜೆಡಿಎಸ್ ಕಾಂಗ್ರೆಸ್ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಲು ತೀರ್ಮಾನ  ಮಾಡಿತ್ತು. ಅದಕ್ಕೆ ನಮ್ಮ ಒಪ್ಪಿಗೆಯೂ ಕೂಡ ಇದೆ ಎಂದು ಹೇಳಿದ್ದಾರೆ. 

ಇನ್ನು ಮತ್ತೆ ಜೆಡಿಎಸ್ - ಕಾಂಗ್ರೆಸ್ ಒಂದಾಗಲು ಮಾಡಿದ್ದ ನಿರ್ಧಾರದ ಬಗ್ಗೆ ಮಾತನಾಡಿದ್ದು, ಜೆಡಿಎಸ್ ಗೆ ಮರಳಿ ಹೋಗುವ ಮಾತಿಲ್ಲ. ತಾವು ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದಾಗಿ ಹೇಳಿದ್ದಾರೆ.

loader