ಜಮೀರ್ ಮಂತ್ರಿಗಿರಿಗೆ ಜೆಡಿಎಸ್ ವಿರೋಧ ..?

Zameer Ahmed Become Minister Of Karnataka. ?
Highlights

 ರಾಜಕೀಯವಾಗಿ ಬದ್ಧ ದ್ವೇಷಿಗಳಾಗಿದ್ದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಅವರೊಂದಿಗೆ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಚಿವ ಸಂಪುಟ ಪ್ರವೇಶಿಸುತ್ತಾರಾ ಎಂಬ ಕುತೂಹಲ ಮೂಡಿದೆ.

ಬೆಂಗಳೂರು: ರಾಜಕೀಯವಾಗಿ ಬದ್ಧ ದ್ವೇಷಿಗಳಾಗಿದ್ದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಅವರೊಂದಿಗೆ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಚಿವ ಸಂಪುಟ ಪ್ರವೇಶಿಸುತ್ತಾರಾ ಎಂಬ ಕುತೂಹಲ ಮೂಡಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ತೆರೆಮರೆ ಯಲ್ಲಿ ಹೊಂದಾಣಿಕೆ ಯಶಸ್ವಿಯಾದ ನಂತರ ಕುಮಾರಸ್ವಾಮಿ ಮತ್ತು ಶಿವಕು ಮಾರ್ ನಡುವೆ ಮೊದಲಿನ ದ್ವೇಷ ಕಂಡು ಬರುತ್ತಿಲ್ಲ. ಕಳೆದ ನಾಲ್ಕೈದು ದಿನಗಳ ಬೆಳವಣಿಗೆ ನಂತರ ಉಭಯ ನಾಯಕರ ನಡುವೆ ತುಂಬಾ ದಿನಗಳ ದೋಸ್ತಿ ಆದಂತೆ ಕಂಡು ಬರುತ್ತಿದೆ. 

ಹೀಗಾಗಿ, ಕಾಂಗ್ರೆಸ್ ಬಯಸಿದರೆ, ಶಿವಕುಮಾರ್ ಒಪ್ಪಿದರೆ ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿ ಕೊಳ್ಳುವುದಕ್ಕೆ ಆಕ್ಷೇಪಣೆ ಜೆಡಿಎಸ್ ಪಾಳೆ ಯದಿಂದ ವ್ಯಕ್ತವಾಗುವ ಸಾಧ್ಯತೆ ಇಲ್ಲ. ಆದರೆ, ಇದೇ ಮಾತು ಜಮೀರ್ ಅಹಮದ್‌ಗೆ ಅನ್ವಯವಾಗುವುದು ಅನುಮಾನ. ಜಮೀರ್ ಅವರು ಈಗ ಅನಿವಾ ರ್ಯವಾಗಿ ಮೃದು ಧೋರಣೆ ತಳೆದಿದ್ದಾರೆ. ದೇವೇಗೌಡರು ಮಾತ್ರ ಹಳೆಯದನ್ನು ಮರೆತಂತಿಲ್ಲ.

loader