ಮೇಲ್ಮನೆಗೆ ವೈಎಸ್ ವಿ ದತ್ತಾ ನೇಮಕ ಸಂಭವ

YSV Datta May Get Important Post
Highlights

 ಕಡೂರು ಕ್ಷೇತ್ರದಿಂದ ಸೋಲು ಅನುಭವಿಸಿರುವ  ಪಕ್ಷದ ಹಿರಿಯ ಮುಖಂಡ ವೈ.ಎಸ್.ವಿ.ದತ್ತ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ನೇಮಿಸಿ ಸಚಿವ ಹುದ್ದೆ ನೀಡಲಾಗುತ್ತದೆಯೇ? ದಶಕಗಳಿಂದಲೂ ಪಕ್ಷದ ವರಿಷ್ಠ  ನಾಯಕ ಎಚ್.ಡಿ.  ದೇವೇಗೌಡರ ನೆರಳಿನಂತೆ ಕೆಲಸ ಮಾಡಿರುವ ದತ್ತ ಅವರ ಅನುಭವವನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಳಸಿಕೊಳ್ಳಬೇಕು. ಆ ಮೂಲಕ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಬೆಂಗಳೂರು : ಕಡೂರು ಕ್ಷೇತ್ರದಿಂದ ಸೋಲು ಅನುಭವಿಸಿರುವ  ಪಕ್ಷದ ಹಿರಿಯ ಮುಖಂಡ ವೈ.ಎಸ್.ವಿ.ದತ್ತ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ನೇಮಿಸಿ ಸಚಿವ ಹುದ್ದೆ ನೀಡಲಾಗುತ್ತದೆಯೇ? ದಶಕಗಳಿಂದಲೂ ಪಕ್ಷದ ವರಿಷ್ಠ ನಾಯಕ ಎಚ್.ಡಿ. ದೇವೇಗೌಡರ ನೆರಳಿನಂತೆ ಕೆಲಸ ಮಾಡಿರುವ ದತ್ತ ಅವರ ಅನುಭವವನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಳಸಿಕೊಳ್ಳಬೇಕು. ಆ ಮೂಲಕ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಈಗ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾವಣೆ ಎದುರಾಗಿದೆ. ಜೆಡಿಎಸ್ ಗೆ ಎರಡು ಸ್ಥಾನಗಳು ಲಭಿಸಲಿವೆ. ಒಂದು ಸ್ಥಾನವನ್ನು ಬಿ.ಎಂ.ಫಾರೂಕ್ ಅವರಿಗೆ ನೀಡಿದರೂ ಮತ್ತೊಂದು ಸ್ಥಾನವನ್ನು ದತ್ತ ಅವರಿಗೆ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. 2013 ರಲ್ಲಿ ದತ್ತ ಅವರು ಚಿಕ್ಕಮಗಳೂರಿನ ಕಡೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅದಕ್ಕೂ ಮೊದಲು ಅವರು ಮೇಲ್ಮನೆ ಸದಸ್ಯರಾಗಿದ್ದರು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದ ರಿಂದ ದತ್ತ ಅವರು ಫಲಿತಾಂಶ ಹೊರಬಿದ್ದ ದಿನದಿಂದ ಪಕ್ಷದ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಕಾಣಿಸಿ ಕೊಳ್ಳುತ್ತಿಲ್ಲ. 

ಹಾಗೆ ನೋಡಿದರೆ ದತ್ತ ಅವರು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗಿಂತ ದೇವೇಗೌಡರಿಗೇ ಹೆಚ್ಚು ಆಪ್ತರು. ಒಂದು ಹಂತದಲ್ಲಿ  ಕುಮಾರಸ್ವಾಮಿ ಮತ್ತು ದತ್ತ ಅವರ ನಡುವೆ ಭಿನ್ನಾಭಿಪ್ರಾಯವೂ ಕಂಡು ಬಂದಿತ್ತು. ಹೀಗಾಗಿಯೇ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಅನುಮಾನವೂ ವ್ಯಕ್ತವಾಗಿತ್ತು. ನಂತರ ಅದು ಶಮನಗೊಂಡು ಟಿಕೆಟ್ ನೀಡಲಾಗಿತ್ತು. ದತ್ತ ಅವರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾಗಿದ್ದ ಬೆಳ್ಳಿ ಪ್ರಕಾಶ್ ಗೆಲುವು ಸಾಧಿಸಿದ್ದಾರೆ. 

ಒಂದು ವೇಳೆ ದತ್ತ ಅವರು ಈ ಚುನಾವಣೆಯಲ್ಲಿ ಗೆಲುವು ಪಡೆದುಕೊಂಡಿದ್ದರೆ ಈ ಸಮ್ಮಿಶ್ರ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.

loader