ನಾವು ಬಿಟ್ಟರೂ, ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸ್: ಭಟ್ಟರ ಹಾಡು ಫುಲ್ ವೈರಲ್

Yogaraj Bhat song on selection of candidate becomes viral
Highlights

ವೋಟು ಹಾಕುವುದು ಪ್ರಜ್ಞಾವಂತರ ಆದ್ಯ ಕರ್ತವ್ಯ. ಯಾರಿಗೆ ಮತ ಹಾಕ ಬೇಕು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಪ್ರತಿಯೊಬ್ಬ ನಾಗರಿಕನ ಗೊಂದಲವನ್ನು ನಿರ್ದೇಶಕ ಯೋಗರಾಜ್ ಭಟ್ಟರು ತಮ್ಮ ವಿಶಿಷ್ಟ ಭಾಷೆಯಲ್ಲಿ, ಹಾಡಿನ ಮೂಲಕ ವಿವರಿಸಿದ್ದಾರೆ. ಎಲ್ಲರಲ್ಲಿಯೂ ಇರುವ ಈ ಗೊಂದಲ ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಹೊಂದುವಂತಿದೆ. 'ಪಂಚಚಂತ್ರ' ಚಿತ್ರದ ಈ ಗೀತೆಯನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಬೆಂಗಳೂರು: ಐದು ವರ್ಷಗಳಿಗೊಮ್ಮೆ ಮನೆಗೆ ಬಂದು ವೋಟು ಕೇಳುವ ರಾಜಕಾರಣಿಗಳು, ಗೆದ್ದರೆ ಮತ್ತೆ ಇತ್ತ ಮುಖ ಹಾಕುವುದಿಲ್ಲ. ಸುಳ್ಳು ಹೇಳದ, ಭ್ರಷ್ಟಚಾರಿಯಲ್ಲದ ರಾಜಕಾರಣಿಯನ್ನು ಆರಿಸುವುದು ಕಷ್ಟ ಕಷ್ಟ.

ಆದರೆ, ವೋಟು ಹಾಕುವುದು ಪ್ರಜ್ಞಾವಂತರ ಆದ್ಯ ಕರ್ತವ್ಯ. ಯಾರಿಗೆ ಮತ ಹಾಕ ಬೇಕು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಪ್ರತಿಯೊಬ್ಬ ನಾಗರಿಕನ ಗೊಂದಲವನ್ನು ನಿರ್ದೇಶಕ ಯೋಗರಾಜ್ ಭಟ್ಟರು ತಮ್ಮ ವಿಶಿಷ್ಟ ಭಾಷೆಯಲ್ಲಿ, ಹಾಡಿನ ಮೂಲಕ ವಿವರಿಸಿದ್ದಾರೆ. ಎಲ್ಲರಲ್ಲಿಯೂ ಇರುವ ಈ ಗೊಂದಲ ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಹೊಂದುವಂತಿದೆ. 'ಪಂಚಚಂತ್ರ' ಚಿತ್ರದ ಈ ಗೀತೆಯನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಕಷ್ಟ ಸಾಧ್ಯವಾದರೂ ವೋಟ್ ಮಾಡುವುದನ್ನು ಮಾತ್ರ ತಪ್ಪಿಸಬೇಡಿ ಎಂಬ ಹಿತನುಡಿಯನ್ನು ಈ ಹಾಡು ಹೊಂದಿದ್ದು, ಇದೀಗ ಫುಲ್ ವೈರಲ್ ಆಗುತ್ತಿದೆ.

loader