ಜೋತಿಷ್ಯದ ಪ್ರಕಾರ ನನಗಷ್ಟೇ ಸಿಎಂ ಭಾಗ್ಯ

will win this election Says  kumaraswamy
Highlights

ಜೆಡಿಎಸ್‌ಗೆ ಕೇವಲ 20-25 ಸೀಟುಗಳು ಬರುತ್ತವೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ, ಜೋತಿಷ್ಯದ ಪ್ರಕಾರ ನನಗಷ್ಟೇ ಸಿಎಂ ಆಗುವ ಅವಕಾಶವಿದೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಳ್ಳಾರಿ: ಜೆಡಿಎಸ್‌ಗೆ ಕೇವಲ 20-25 ಸೀಟುಗಳು ಬರುತ್ತವೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ, ಜೋತಿಷ್ಯದ ಪ್ರಕಾರ ನನಗಷ್ಟೇ ಸಿಎಂ ಆಗುವ ಅವಕಾಶವಿದೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೃಶ್ಯ ಮಾಧ್ಯಮದಲ್ಲಿ ಜ್ಯೋತಿಷಿಗಳು ನನ್ನದು, ಬಿ.ಎಸ್.ಯಡಿಯೂರಪ್ಪ ಅವರದ್ದು ಹಾಗೂ ಸಿದ್ದರಾಮಯ್ಯ ಅವರ ಜಾತಕ ಹಿಡಿದು ಭವಿಷ್ಯ ನುಡಿದಿದ್ದಾರೆ. 

ಅದರ ಪ್ರಕಾರ, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಅವಕಾಶವಿಲ್ಲ. ಕುಮಾರಸ್ವಾಮಿ ಅವರಿಗೆ ಅವಕಾಶ ಇದೆ. ಆದರೆ, ಅವರ ಆರೋಗ್ಯಕ್ಕೆ ತೊಂದರೆ ಆಗಬಹುದು ಎಂದಿದ್ದಾರೆ. 

ನಿಮ್ಮ ಆಶೀರ್ವಾದ ಇದ್ದರೆ ನನ್ನ ಆರೋಗ್ಯಕ್ಕೆ ಏನೂ ಆಗಲ್ಲ. ಹೃದಯದ ಆಪರೇಷನ್ ಆಗಿ, ಒಂದೇ ತಿಂಗಳಲ್ಲಿ ಏಕಾಂಗಿಯಾಗಿ ರಾಜ್ಯ ಸುತ್ತುತ್ತಿದ್ದೇನೆ. ನನ್ನ ಆರೋಗ್ಯಕ್ಕಿಂತ ನಮ್ಮ ರೈತರ ಬಗ್ಗೆ ನನಗೆ ಕಳಕಳಿ ಇದೆ. ರೈತರನ್ನು ಉಳಿಸಲು ಹೊರಟಿದ್ದೇನೆ. ಬಿಜೆಪಿ ಪ್ರಣಾಳಿಕೆ ಬಗ್ಗೆ ಟೀಕಿಸಲ್ಲ. 1 ಲಕ್ಷ ಸಾಲಮನ್ನಾ ಬಗ್ಗೆ ಹೇಳಿದ್ದಾರೆ. ಈಗಲಾದರೂ ಅವರಿಗೆ ಜ್ಞಾನೋದಯವಾಗಿದೆ ಎಂದರು.

loader