ಸ್ಪರ್ಧೆಗೆ ಅಂಬಿ ನಕಾರ: ರಮ್ಯಾ ನಿಲ್ತಾರಾ?

Will Ramya contest from Mandya constituency as Ambarish denies it
Highlights

ಅರ್ಜಿ ಸಲ್ಲಿಸದೇ ಹೋದರೂ, ಈಗಾಗಲೇ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಅಂಬರೀಷ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಟಿಕೆಟ್ ಸಿಕ್ಕರೂ ಬಿ ಫಾರ್ಮ್ ಪಡೆಯಲು ಬಾರದ ರೆಬೆಲ್ ಸ್ಟಾರ್‌ಗೆ ಕಾಂಗ್ರೆಸ್ ಮುಖಂಡರು ಖುದ್ದು ಮನೆಗೇ ಹೋಗಿ, ಬಿ ಫಾರ್ಮ್ ಸಹ ಕೊಟ್ಟು ಬಂದಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷ ಅಂಬರೀಷ್ ಹೆಸರನ್ನೂ ಸೇರಿಸಿದೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಿರುವ ಅಂಬರೀಷ್, ಹೈ ಕಮಾಂಡ್‌ಗೆ ಮತ್ತೊಂದು ಸಂಕಟ ತಂದಿಟ್ಟಿದ್ದಾರೆ. ಆದರೆ, ಈ ಸ್ಥಾನಕ್ಕೆ ರಮ್ಯಾ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರವೇ ಕಡೇ ದಿನ. ಇನ್ನೈದು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಹೊರ ಬರುವ ನಿರೀಕ್ಷೆ ಇದೆ. 

ಒಮ್ಮೆಗೇ 218 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಕೇವಲ ಐದು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದು ಬಾಕಿ ಇದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾಯವಣೆಯೊಂದಿಗೆ, ಹೊಸ ಪಟ್ಟಿಯನ್ನು ಹೊರ ಬೀಳಲಿದೆ.

ಅರ್ಜಿ ಸಲ್ಲಿಸದೇ ಹೋದರೂ, ಈಗಾಗಲೇ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಅಂಬರೀಷ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಟಿಕೆಟ್ ಸಿಕ್ಕರೂ ಬಿ ಫಾರ್ಮ್ ಪಡೆಯಲು ಬಾರದ ರೆಬೆಲ್ ಸ್ಟಾರ್‌ಗೆ ಕಾಂಗ್ರೆಸ್ ಮುಖಂಡರು ಖುದ್ದು ಮನೆಗೇ ಹೋಗಿ, ಬಿ ಫಾರ್ಮ್ ಸಹ ಕೊಟ್ಟು ಬಂದಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷ ಅಂಬರೀಷ್ ಹೆಸರನ್ನೂ ಸೇರಿಸಿದೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಿರುವ ಅಂಬರೀಷ್, ಹೈ ಕಮಾಂಡ್‌ಗೆ ಮತ್ತೊಂದು ಸಂಕಟ ತಂದಿಟ್ಟಿದ್ದಾರೆ.

ಆದರೆ, ಈ ಸ್ಥಾನಕ್ಕೆ ರಮ್ಯಾ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. 'ಇಲ್ಲ, ನಾನು  ಸ್ಪರ್ಧಿಸುವುದಿಲ್ಲ...' ಎಂದು ಟ್ವೀಟ್ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಕ್ಷೇತ್ರಕ್ಕೆ ಅನೇಕರ ಹೆಸರು ಕೇಳಿ ಬರುತ್ತಿದ್ದು, ಅಂತಿಮವಾಗಿ ಯಾರು ಆಯ್ಕೆಯಾಗುತ್ತಾರೆಂಬ ಬಗ್ಗೆ ಇನ್ನೂ ಪಟ್ಟಿ ಘೋಷಣೆಯಾದ ಬಳಿಕವಷ್ಟೇ ಸ್ಫಷ್ಟವಾಗಲಿದೆ.
 

loader