ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕುಟುಂಬದಿಂದ ಬಹಿಷ್ಕಾರ

Will Disown Son If He Backs BJP HD Deve Gowda
Highlights

ನಾನು ಅಂದು ತಪ್ಪು ಮಾಡಿದ್ದೆ. ಆದ್ದರಿಂದ ನಮ್ಮ ತಂದೆಯವರು ಆಘಾತಕ್ಕೊಳಗಾಗಿದ್ದರು' ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಮುಂದೆ 2006ರಲ್ಲಾದ ತಪ್ಪು ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಕುಮಾರಸ್ವಾಮಿ ಕೈಜೋಡಿಸುತ್ತಾರೆ ಎಂಬ ಮಾತುಗಳ ಬಗ್ಗೆ ಜೆಡಿಎಸ್ ವರಿಷ್ಠ ಸ್ಪಷ್ಟಿಕರಣ ನೀಡಿದರು.

ಬೆಂಗಳೂರು(ಏ.30): ನನ್ನ ಮಾತು ಮೀರಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೋಗುವಂತಿಲ್ಲ. ಬಿಜೆಪಿ ಜತೆ ಜೆಡಿಎಸ್​​ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಒಂದು ವೇಳೆ ನನ್ನ ಮಾತು ಮೀರಿ ಬಿಜೆಪಿ ಜೊತೆ ಕೈಜೋಡಿಸಿದರೆ ಕುಮಾರಸ್ವಾಮಿ ನನ್ನ ಮಗನೆ ಅಲ್ಲ' ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಡ್ಡಿತುಂಡು ಮಾಡಿದ ಹಾಗೆ ಹೇಳಿದರು.

ಎನ್.ಡಿ ಟಿವಿ ಮುಖ್ಯ ಸಂಪಾದಕರಾದ ಪ್ರಣಯ್ ರಾಯ್, ಹಿರಿಯ ಪತ್ರಕರ್ತ ಶೇಖರ್ ಗುಪ್ತ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೈತ್ರಿಗೆ ಮುಂದಾದರೆ, ನಾನು, ನನ್ನ ಪತ್ನಿ  ಮತ್ತು ಕುಟುಂಬ, ಕುಮಾರಸ್ವಾಮಿಯವರನ್ನು ಬಹಿಷ್ಕರಿಸುತ್ತೇವೆ. ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾಗಬೇಕೆಂದರೆ ನನ್ನ ಜೊತೆ ಚರ್ಚಿಸಬೇಕಾಗುತ್ತದೆ. ಅನಂತರ ಮುಂದಿನ ನಡೆ ಎಂದು ಹೇಳಿದರು.

2006ರಲ್ಲಿ ಆದ ತಪ್ಪಿಗೆ ಹೆಚ್'ಡಿಕೆ ಪಾಠ ಕಲಿತ್ತಿದ್ದಾರೆ.   

ನಾನು ಅಂದು ತಪ್ಪು ಮಾಡಿದ್ದೆ. ಆದ್ದರಿಂದ ನಮ್ಮ ತಂದೆಯವರು ಆಘಾತಕ್ಕೊಳಗಾಗಿದ್ದರು' ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಮುಂದೆ 2006ರಲ್ಲಾದ ತಪ್ಪು ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಕುಮಾರಸ್ವಾಮಿ ಕೈಜೋಡಿಸುತ್ತಾರೆ ಎಂಬ ಮಾತುಗಳ ಬಗ್ಗೆ ಜೆಡಿಎಸ್ ವರಿಷ್ಠ ಸ್ಪಷ್ಟಿಕರಣ ನೀಡಿದರು.

ವಾಜಪೇಯಿಗೂ ಮೋದಿಯವರಿಗೂ ತುಂಬ ವ್ಯಾತ್ಯಾಸವಿದೆ

6 ವರ್ಷ ಆಡಳಿತ ನಡೆಸಿದ ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರಿಗೂ 4 ವರ್ಷ ಪೂರೈಸುತ್ತಿರುವ ನರೇಮದ್ರ ಮೋದಿಯವರಿಗೂ ತುಂಬ ವ್ಯತ್ಯಾಸವಿದೆ. ಮೋದಿಯವರ ಆಡಳಿತದಲ್ಲಿ ಮುಸ್ಲಿಂ, ದಲಿತ ಸಮುದಾಯದವರು ಆತಂಕದಿಂದ ಜೀವನ ಸಾಗಿಸುವಂತಾಗಿದೆ. ಗೋಸಂರಕ್ಷಕರ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆಯಾಗುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದರು.

"

ವಿಡಿಯೋ ಕೃಪೆ : NDTV

loader