ವಿಶ್ವಾಸಮತ ಯಾಚನೆ ಕಹಾನಿಯಲ್ಲಿ ಟ್ವಿಸ್ಟ್!

First Published 19, May 2018, 2:42 PM IST
Whip Issued To KPJP MLA Shankar
Highlights
  • ಶಾಸಕ ಶಂಕರ್ ವಿರುದ್ಧ ತಿರುಗಿಬಿದ್ದ ಕೆಪಿಜೆಪಿ ಅಧ್ಯಕ್ಷ ಮಹೇಶ್ ಗೌಡ
  • ಯಾವುದೇ ಪಕ್ಷಕ್ಕೆ ಬೆಂಬಲ ನೀಡದಂತೆ ಶಂಕರ್‌ಗೆ ವಿಪ್

 

ಬೆಂಗಳೂರು [ಮೇ.19]:  ಶಾಸಕ ಶಂಕರ್ ವಿರುದ್ಧ ಕೆಪಿಜೆಪಿ ಪಕ್ಷದ ಅಧ್ಯಕ್ಷ ಮಹೇಶ್ ಗೌಡ ತಿರುಗಿಬಿದ್ದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಮಹೇಶ್ ಗೌಡ ಗರಂ ಆಗಿದ್ದಾರೆ.

ರಾಣಿಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಕೆಪಿಜೆಪಿ ಪಕ್ಷದ ಶಾಸಕ ಶಂಕರ್, ಪಕ್ಷದ ಸಮಿತಿಯ ಅನುಮತಿಯಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಶಂಕರ್ ಬೆಂಬಲ ನೀಡಿದ್ದಾರೆನ್ನಲಾಗಿದೆ.

ಹೀಗಾಗಿ ಶಂಕರ್ ಯಾವುದೇ ಪಕ್ಷಕ್ಕೆ ಬೆಂಬಲ ನೀಡದೇ ತಟಸ್ಥರಾಗಿರಬೇಕೆಂದು ವಿಪ್ ಜಾರಿಗೊಳಿಸಲಾಗಿದೆ. 

 

loader