ಬೆಂಗಳೂರು: ಈಗಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಮಾಹಿತಿಗೂ ಗೂಗಲ್ ಅನ್ನು ತಡಕಾಡೋದು ಸಹಜ. ಕಾಂಗ್ರೆಸ್ ಐಟಿ ಸೆಲೆ ಮುಖ್ಯಸ್ಥೆ ರಮ್ಯಾ ಸಹ ಭಾರತದ ಮೊದಲ ಪ್ರಧಾನಿ ಯಾರೆಂದು ತಿಳಿದುಕೊಳ್ಳಲು ಗೂಗಲ್ ಮೊರೆ ಹೋಗಿದ್ದಾರೆ. ನೋಡಿದಾಗ ಅವರಿಗೆೊಂದು ಅಚ್ಚರಿ ಕಾದಿತ್ತು.

ಜವಾಹರ್ ಲಾಲ್ ನೆಹರು ಎಂಬ ಮಾಹಿತಿ ತೋರಿಸುವುದರ ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕಾಣಿಸಿಕೊಂಡಿದ್ದಕ್ಕೆ ರಮ್ಯಾ ಗರಂ ಆಗಿದ್ದಾರೆ. ಈ ಬಗ್ಗೆ ಗೂಗಲ್‌ಗೆ ಟ್ವೀಟ್ ಮಾಡಿದ ರಮ್ಯಾ, ಇಂಥ ಕಸವೇ ಗೂಗಲ್‌ನಲ್ಲಿ ತುಂಬಿದ್ದು, ದಯವಿಟ್ಟು ಸರಿ ಪಡಿಸಿ ಎಂದು ಕೋರಿದ್ದಾರೆ. ಮೋದಿ 
ವಿರುದ್ಧ ಸದಾ ಕಿಡಿಕಾರುವ ರಮ್ಯಾರಿಗೆ, ನೆಹರು ಮಾಹಿತಿ ಹುಡುಕಿದಾಗ ದೇಶದ ಮೊದಲ ಪ್ರಧಾನಿ ಫೋಟೋ ಬದಲು, ಈಗಿನ ಪ್ರಧಾನ ಚಿತ್ರ ಕಾಣಿಸಿಕೊಂಡಿದ್ದು ಸಹಜವಾಗಿಯೇ ಆಕ್ರೋಶ ತರಿಸಿದೆ.

ಆದರೆ, ಪ್ರಧಾನಿಗಳ ಪಟ್ಟಿಯನ್ನು ನೋಡಿದರೆ, ಎಲ್ಲ ಮಾಹಿತಿಗಳೂ ಸ್ಪಷ್ಟವಾಗಿದ್ದು, ಬಳಸಿರುವ ಫೋಟೋಗಳೂ ಗೂಗಲ್‌ನಲ್ಲಿ ಸರಿಯಾಗೇ ಇವೆ. ಫಸ್ಟ್ ಪಿಎಂ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಮಾತ್ರ ಮೋದಿ ಗೂಗಲ್ ನೆಹರು ಹೆಸರು, ಮೋದಿ ಫೋಟೋ ತೋರಿಸುತ್ತದೆ.