ಮಮತಾ ಅವರ ಕಾರಿಗೆ ವಿಧಾನಸೌಧದ ಒಳಗಡೆ ಪ್ರವೇಶ ನೀಡದ ಕಾರಣ ಅವರು ಪ್ರಮಾಣ ವಚನ ಸಮಾರಂಭದ ವೇದಿಕೆಗೆ ಕಾಲ್ನಡಿಗೆಯಲ್ಲೆ ಆಗಮಿಸಿದರು. ಭದ್ರತಾ ಅವ್ಯವಸ್ಥೆ ಬಗ್ಗೆ ಸ್ಥಳದಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು

ಬೆಂಗಳೂರು(ಮೇ.23): ವಿಧಾನಸೌಧದ ಒಳಗಡೆ ಕಾರು ಪ್ರವೇಶಕ್ಕೆ ಸೂಕ್ತ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲೇ ರಾಜ್ಯ ಡಿಜಿ-ಐಜಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಮತಾ ಅವರ ಕಾರಿಗೆ ವಿಧಾನಸೌಧದ ಒಳಗಡೆ ಪ್ರವೇಶ ನೀಡದ ಕಾರಣ ಅವರು ಪ್ರಮಾಣ ವಚನ ಸಮಾರಂಭದ ವೇದಿಕೆಗೆ ಕಾಲ್ನಡಿಗೆಯಲ್ಲೆ ಆಗಮಿಸಿದರು. ಭದ್ರತಾ ಅವ್ಯವಸ್ಥೆ ಬಗ್ಗೆ ಸ್ಥಳದಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರಿಗೆ ಕ್ಷಮೆಯಾಚಿಸಿದರು.

Scroll to load tweet…