ಪ್ರಚಾರದ ವೇಳೆ ಸಂತೋಷ್ ಲಾಡ್’ನನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Voters Anger on Santosh Lad
Highlights

ಸಂತೋಷ್ ಲಾಡ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ  ಕಲಘಟಗಿ ವಿಧಾನಸಭಾ ಕ್ಷೇತ್ರದ ಸಲಕಿನಕೊಪ್ಪ ಗ್ರಾಮಸ್ಥರು ಮುತ್ತಿಗೆ ಹಾಕಿ ತರಾಟೆಗೆ ತೆಗದುಕೊಂಡಿದ್ದಾರೆ. 

ಬಳ್ಳಾರಿ (ಮೇ. 03): ಸಂತೋಷ್ ಲಾಡ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ  ಕಲಘಟಗಿ ವಿಧಾನಸಭಾ ಕ್ಷೇತ್ರದ ಸಲಕಿನಕೊಪ್ಪ ಗ್ರಾಮಸ್ಥರು ಮುತ್ತಿಗೆ ಹಾಕಿ ತರಾಟೆಗೆ ತೆಗದುಕೊಂಡಿದ್ದಾರೆ. 

ಗ್ರಾಮದಲ್ಲಿ ಗರಡಿ ಮನೆ ನಿರ್ಮಾಣ ಮಾಡುವುದಾಗಿ ಸಂತೋಷ್ ಲಾಡ್ ಭರವಸೆ‌ ನೀಡಿದ್ದರು.  ಹತ್ತು ವರ್ಷ ಕಳೆದರೂ ಗರಡಿಮನೆಗೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಡು ರಸ್ತೆಯಲ್ಲೇ ಸಂತೋಷ ಲಾಡ್ ಗೆ ದಿಕ್ಕಾರ ಕೂಗಿದ್ದಾರೆ. ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಗರಡಿ ಮನೆಗೆ ಎರಡು ಲಕ್ಷ‌ ರೂಪಾಯಿ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.  ನಾಳೆಯೇ ಹಣ‌ ಕೊಡ್ತೀನಿ ಎಂದು ಬಹಿರಂಗವಾಗಿ ಜನರಿಗೆ ಆಮಿಷವೊಡ್ಡಿದ್ದಾರೆ. ಆದರೆ ಲಾಡ್ ಆಮಿಷವನ್ನು ಜನ  ತಿರಸ್ಕರಿಸಿದ್ದಾರೆ. 

ರಸ್ತೆ‌‌ ಕಾಮಗಾರಿ ಕಳಪೆ ಆಗಿರುವ ಬಗ್ಗೆಯೂ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಮತ ಕೇಳಲು ಮಾತ್ರ ಬರುತ್ತೀರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.  ಜೈ ಎಂದು ಹೇಳಿ ಸಂತೋಷ್ ಲಾಡ್  ಕಾರು ಹತ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. 
 

loader