ಮತಚೀಟಿ ಪ್ರಕರಣ : ಕಾಂಗ್ರೆಸ್ ಕಾರ್ಯಕರ್ತನ ಬಂಧನ

Voter ID Scam Congress Workers Arrest
Highlights

ಜಾಲಹಳ್ಳಿ ಬಳಿಯ ಎಸ್‌ಎಲ್‌ವಿ ವ್ಯೆ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಚೀಟಿ ಸಂಗ್ರಹ ಪ್ರಕರಣ ಸಂಬಂಧ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

ಬೆಂಗಳೂರು :  ಜಾಲಹಳ್ಳಿ ಬಳಿಯ ಎಸ್‌ಎಲ್‌ವಿ ವ್ಯೆ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಚೀಟಿ ಸಂಗ್ರಹ ಪ್ರಕರಣ ಸಂಬಂಧ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿ.ಕೆ.ನಗರದ ನಿವಾಸಿ ಚಿನ್ನದೊರೈ ಬಂಧಿತ ನಾಗಿದ್ದು, ಮತದಾರರಿಗೆ ಆಮಿಷವೊಡ್ಡಿ ಪಕ್ಷದ ಅಭ್ಯರ್ಥಿಗೆ ಮತಹಾಕಿಸುವ ಸಲುವಾಗಿ ಮತ ದಾರರ ಚೀಟಿಗಳನ್ನು ಆರೋಪಿ ಸಂಗ್ರಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮತದಾರರ ಚೀಟಿ ಸಂಗ್ರಹ ಪ್ರಕರಣ ಸಂಬಂಧ ನಾಲ್ಕನೇ ಆರೋಪಿ ಚಿನ್ನದೊರೈನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಆ ಅಪಾರ್ಟ್ ಮೆಂಟ್‌ನ ಫ್ಲ್ಯಾಟ್‌ನಲ್ಲಿ ಪತ್ತೆಯಾದ ವಾಟರ್ ಕ್ಯಾನ್‌ಗಳು ಹಾಗೂ ಕರಪತ್ರಗಳನ್ನು ಆಧರಿಸಿ ಮತದಾರರಿಗೆ ಆಮಿಷವೊಡ್ಡಿದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ವಾಟರ್ ಕ್ಯಾನ್‌ಗಳ ಮೇಲೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಮತ ಹಾಕಿ ಎನ್ನುವ ಸ್ಟಿಕ್ಕರ್ ಅಂಟಿಸಲಾಗಿತ್ತು. ಇದರಿಂದ ಚುನಾವಣಾ ಅಕ್ರಮದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಇನ್ನುಳಿದ ಆರೋಪಿ ಗಳ ವಿರುದ್ಧ ಶೀಘ್ರವೇ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತರು ಸುದ್ದಿಗಾರರಿಗೆ ಮಾಹಿತಿ ನೀಡಿದರು. 

ಹಲವು ದಿನಗಳಿಂದ ಕಾಂಗ್ರೆಸ್ ಪಕ್ಷ ದಲ್ಲಿ ಬಿ.ಕೆ.ನಗರದ ಚಿನ್ನದೊರೈ ಗುರುತಿಸಿಕೊಂಡಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ  ಮುನಿರತ್ನ ಪರವಾಗಿ ಆತ ಪ್ರಚಾರದಲ್ಲಿ ತೊಡ ಗಿದ್ದ. ಬಿ.ಕೆ.ನಗರದ ಬೂತ್‌ಗೆ ಕಾಂಗ್ರೆಸ್ ಪಕ್ಷದ ಉಸ್ತುವಾರಿಯೂ ಸಹ ಆಗಿದ್ದ ಆರೋಪಿ, ಅಲ್ಲಿ ಮತದಾರರಿಗೆ ಆಮಿಷವೊಡ್ಡಲು ಆತ ಯತ್ನಿ ಸಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಕ್ಷೇತ್ರದಲ್ಲಿ 500 ಮತದಾರರ ಗುಂಪಿಗೆ ಓರ್ವನನ್ನು ಉಸ್ತುವಾರಿಯಾಗಿ ಅಭ್ಯರ್ಥಿ ನೇಮಿಸಿದ್ದಾರೆ. ನಮ್ಮಿಂದ ಹಣ ಪಡೆದ ಎಲ್ಲರು ಮತಹಾಕುತ್ತಾರೆ ಎಂಬ ಖಾತ್ರಿ ಇರುವುದಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಚಿನ್ನದೊರೈ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

loader