Asianet Suvarna News Asianet Suvarna News

ಮತಗಟ್ಟೆಯಲ್ಲೇ ಪೋಟೋ ಕ್ಲಿಕ್ಕಿಸಿ ವಾಟ್ಸಪ್ ಮಾಡಿದ ಮತದಾರ..!

ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಪರ ವೋಟ್ ಮಾಡಿರುವ ಪೋಟೋವನ್ನು ಮತದಾರನ್ನೊಬ್ಬ ವಾಟ್ಸಪ್’ನಲ್ಲಿ ಶೇರ್ ಮಾಡಿದ್ದಾನೆ.

Voter Clicks Selfie in Voting Boot in Koppal

ಕೊಪ್ಪಳ[ಮೇ.12]: ವಿಧಾಸಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಚುನಾವಣಾ ಸಿಬ್ಬಂದಿ ಕಣ್ತಪ್ಪಿಸಿ ಮತಯಂತ್ರದ ಒಳಗೆ ಮತದಾರನೊಬ್ಬ ಪೋಟೋ ಕ್ಲಿಕ್ಕಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಪರ ವೋಟ್ ಮಾಡಿರುವ ಪೋಟೋವನ್ನು ವಾಟ್ಸಪ್’ನಲ್ಲಿ ಶೇರ್ ಮಾಡಿದ್ದಾನೆ. ಭಾರತದ ಸಂವಿಧಾನವು ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಈ ಮತದಾರ ತಾನು ಕಾಂಗ್ರೆಸ್’ಗೆ ಮತ ನೀಡಿದ್ದೇನೆ ಎಂದು ತೋರಿಸಲು ಪೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.

ಮತದಾನದ ಬಳಿಕ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಟ್ರೆಂಡ್ ಆಗುತ್ತಿದೆ. ಆದರೆ ಮತಗಟ್ಟೆಯೊಳಗೆ ಪೋಟೋ ಕ್ಲಿಕ್ಕಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ರಾಜ್ಯದ 222 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹೈಲೈಟ್ಸ್:
ಒಟ್ಟು ಕ್ಷೇತ್ರಗಳು: 222
ಅಭ್ಯರ್ಥಿಗಳು: 2,636
ಪುರುಷ ಅಭ್ಯರ್ಥಿಗಳು: 2,419
ಮಹಿಳಾ ಅಭ್ಯರ್ಥಿಗಳು: 217
ಪಕ್ಷೇತರ ಅಭ್ಯರ್ಥಿಗಳು: 1,146

Follow Us:
Download App:
  • android
  • ios