ತಪ್ಪದೇ ಮತದಾನ ಮಾಡಿ : ಬೈಕ್ ಗೆಲ್ಲಿ

Vote And Win The Bike
Highlights

ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಯಲ್ಲಿ ಮತ ಹಾಕಿ, ಬೈಕ್ ಗೆಲ್ಲಿ! ಆಶ್ಚರ್ಯವಾಯ್ತ? ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜನರನ್ನು ಪ್ರೋತ್ಸಾಹಿಸಲು ಬೆಂಗಳೂರಿನ ರಾಜಾಜಿನಗರ ಅನುಗ್ರಹ ಕಂಪ್ಯೂಟರ್ ಸೆಂಟರ್ ನಿರ್ಧರಿಸಿದೆ. 

ಬೆಂಗಳೂರು :  ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಯಲ್ಲಿ ಮತ ಹಾಕಿ, ಬೈಕ್ ಗೆಲ್ಲಿ! ಆಶ್ಚರ್ಯವಾಯ್ತ? ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜನರನ್ನು ಪ್ರೋತ್ಸಾಹಿಸಲು ಬೆಂಗಳೂರಿನ ರಾಜಾಜಿನಗರ ಅನುಗ್ರಹ ಕಂಪ್ಯೂಟರ್ ಸೆಂಟರ್ ನಿರ್ಧರಿಸಿದೆ. ಅದಕ್ಕಾಗಿ ಮತದಾನದಲ್ಲಿ ಭಾಗಿ ಯಾದವರಿಗೆ ‘ಯಾರಿಗಾದರೂ ವೋಟ್ ಹಾಕಿ’ ಶೀರ್ಷಿಕೆಯಡಿ ಲಕ್ಕಿ ಡ್ರಾ ಮೂಲಕ 10 ಮೋಟಾರ್ ಬೈಕ್ ನೀಡಲು ಉದ್ದೇಶಿಸಿದೆ. ಕಡ್ಡಾಯ ಮತದಾನದಲ್ಲಿ ಜನತೆಯನ್ನು ಪಾಲುದಾರರನ್ನಾಗಿಸುವುದು ಇದರ ಬಹುಮುಖ್ಯ ಉದ್ದೇಶ. 

ಲಕ್ಕಿ ಡ್ರಾ ಮೂಲಕ ಬೈಕ್ ಗೆಲ್ಲುವವರು ಮೇ 12 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು. ನಂತರ ಇಂಕಿನ ಗುರುತು ಇರುವ ಬೆರಳಿನ ಫೋಟೋವನ್ನು 50 ದಿನದೊಳಗೆ (ಜೂ.30 ರೊಳಗೆ) ವಾಟ್ಸಪ್ ಸಂಖ್ಯೆ 95900 95900 ಇಲ್ಲಿಗೆ ಕಳುಹಿಸಬೇಕು. ವಾಟ್ಸ್‌ಆ್ಯಪ್
ಸಂಖ್ಯೆಯ ಕೊನೆಯ 5 ಅಂಕಿಗಳೇ ನಿಮ್ಮ ಅದೃಷ್ಟ ಸಂಖ್ಯೆ ಆಗಲಿದೆ. ಆಯ್ಕೆಯಾದ ೧೦ ಜನರಿಗೆ ಬಜಾಜ್ ಕಂಪನಿಯ ‘ಸಿಟಿ ೧೦೦ಬಿ’ ಬೈಕ್‌ಗಳನ್ನು ಬಹುಮಾನವಾಗಿ ನೀಡಲಾಗುವುದು. ಯಾವುದೇ ಪ್ರವೇಶ ಶುಲ್ಕವಿಲ್ಲ. ಡ್ರಾ ವಿಧಾನ: ಲಕ್ಕಿ ಡ್ರಾದಲ್ಲಿ ಪಾರದರ್ಶಕತೆ ಕಾಪಾಡಿ  ಕೊಳ್ಳುವ ಉದ್ದೇಶದಿಂದ ಸೆನ್ಸೆಕ್ಸ್ (ಬಾಂಬೆ ಸ್ಟಾಕ್ ಎಕ್ಸ್ ಚೆಂಜ್‌ನ ಸಂವೇದಿ ಸೂಚ್ಯಂಕ) ಬಳಸಿಕೊಳ್ಳಲಾಗುತ್ತಿದೆ.

ಜು.10 ಸಂಜೆ 7ಕ್ಕೆ ಸೂಚ್ಯಂಕ 7 ಅಂಕಿಗಳ ಪೈಕಿ (ದಶಮಾಂಶ ಗಳು ಅಂದರೆ, ಪಾಯಿಂಟ್‌ನ ನಂತರದ ಎರಡಂಕಿಗಳೂ ಸೇರಿ) ಕೊನೆಯ ಐದು ಅಂಕಿಗಳು ಲಕ್ಕಿ ಡ್ರಾದ ವಿಜೇತ ಸಂಖ್ಯೆಯಾಗಿರುತ್ತದೆ. ವಿಜೇತರಿಗೆ ನೀಡಲಾಗುವ ಬೈಕ್‌ಗೆ ನೋಂದಣಿ ಹಾಗೂ ಇತರೆ ವೆಚ್ಚವನ್ನು ಭರಿಸಲಾಗುವುದು ಎಂದು ಅನುಗ್ರಹ ಕಂಪ್ಯೂಟರ್ ಸೆಂಟರ್ ಮಾಲೀಕ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಗ್ರಾಹಕರಿಗಾಗಿ: ಸೆಂಟರ್‌ನಲ್ಲಿ ಯಾವುದೇ ವಸ್ತುಗಳನ್ನು ಕೊಂಡಾಗ ಕೊಡುವ ಲಕ್ಕಿ ಕೂಪನ್‌ನಲ್ಲೂ ನಗದು ಬಹುಮಾನ ಪಡೆಯಬಹುದಾಗಿದೆ. ವರ್ಷದವರೆಗೆ ಪ್ರತಿದಿನ ಡ್ರಾ ನಡೆಯಲಿದೆ. ವೆಬ್‌ಸೈಟ್ ಡಿಡಿಡಿ.95900 95900. , ಫೇಸ್‌ಬುಕ್‌ನಲ್ಲೂ ಮಾಹಿತಿ ಪಡೆಯಬಹುದು.

loader