ಕಡೆಗೂ ಎಚ್ ಡಿಕೆಗೆ ಒಲಿಯಿತು ಸಿಎಂ ಪಟ್ಟ; ನಿಜವಾಯ್ತು ಸ್ವಾಮೀಜಿಯೊಬ್ಬರ ಭವಿಷ್ಯವಾಣಿ

Viral prediction of Predictor Raja Guru Swami Himaval Maheshvara Bhadraanand
Highlights

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿದ್ದಾರೆ. ನೂತನ ಮೂಖ್ಯಮಂತ್ರಿಯಾಗಿ ಎಚ್ ಡಿ ಕುಮಾರ ಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸ್ವಾಮೀಜಿಯೊಬ್ಬರ ಭವಿಷ್ಯವಾಣಿ ನಿಜವಾಗಿದೆ.  

ಬೆಂಗಳೂರು (ಮೇ. 20): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿದ್ದಾರೆ. ನೂತನ ಮೂಖ್ಯಮಂತ್ರಿಯಾಗಿ ಎಚ್ ಡಿ ಕುಮಾರ ಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸ್ವಾಮೀಜಿಯೊಬ್ಬರ ಭವಿಷ್ಯವಾಣಿ ನಿಜವಾಗಿದೆ. 

ರಾಜಾ ಗುರುಸ್ವಾಮಿ ಹಿಮಾವಲ್ ಮಹೇಶ್ವರ ಬ್ರಹ್ಮಾನಂದ ಸ್ವಾಮೀಜಿಯವರು ಕರ್ನಾಟಕ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ರಾಜಕೀಯ ನಾಯಕರು, ಪಕ್ಷಗಳು ಎದುರಿಸುವ ಸವಾಲುಗಳನ್ನು ಮುಂಚೆಯೇ ಹೇಳಿದ್ದರು. ವಿಧಾನ ಸಭಾ ಚುನಾವಣಾ ಫಲಿತಾಂಶದ ನಂತರ ನಡೆದ ರಾಜಕೀಯ ಬೆಳವಣಿಗೆಗಳು ಇದಕ್ಕೆ ಪುಷ್ಟಿ ನೀಡುವಂತಿದೆ. 

ಇತ್ತೀಚಿಗೆ ಖ್ಯಾತ ನಟ ಮೋಹನ್ ಲಾಲ್ ತೊಂದರೆ ಎದುರಿಸುತ್ತಾರೆ ಎಂದಿದ್ದರು. ಸಾಕಷ್ಟು ಖ್ಯಾತನಾಮರ ಬಗ್ಗೆ, ದೇಶದ ರಾಜಕೀಯ ಬೆಳವಣಿಗೆಗಳ ಬಗ್ಗೆ, ರಾಜಕೀಯ ಯಶಸ್ಸು, ವಿಫಲಗಳ ಬಗ್ಗೆ, ಪ್ರಾಕೃತಿಕ ವಿಕೋಪಗಳ ಬಗ್ಗೆ ಹೇಳಿದ್ದ ಭವಿಷ್ಯವಾಣಿ ನಿಜವಾಗಿದೆ. 

ಅಂಬಾನಿ ಸಹೋದರರು ಬೇರೆ ಬೇರೆಯಾಗುತ್ತಾರೆ ಎಂದಿದ್ದರು. ಅವರು ಹೇಳಿದಂತೆ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಬೇರೆ ಬೇರೆಯಾಗಿದ್ದಾರೆ. ಅದೇ ರೀತಿ ಸುನಾಮಿ, ಮುಂಬೈ ಭಯೋತ್ಪಾದಕ ದಾಳಿ 26/11, ಅಮಿತ್ ಶಾ ಪುತ್ರನ ವಿವಾದ ಹೀಗೆ ಅನೇಕ ಸಂಗತಿಗಳಲ್ಲಿ ಇವರ ಮಾತು ಸತ್ಯವಾಗಿದೆ. 

ದೈವ ಭಕ್ತರಾಗಿರುವ ದೇವೇಗೌಡರು ಚುನಾವಣೆಗೂ ಕೆಲ ದಿನಗಳ ಹಿಂದೆ ರಾಜಾ ಗುರು ಸ್ವಾಮೀಜಿಯವನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಪುತ್ರ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅದರಂತೆ ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ವಾಮೀಜಿಯವರ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ದೇವೇಗೌಡರು ಸ್ವಾಮೀಜಿಯವರನ್ನು ಭೇಟಿಯಾದ ಕ್ಷಣ 

 

 

 

loader