Asianet Suvarna News Asianet Suvarna News

ವಿಧಾನ ಸಭಾ ಅಧಿವೇಶನ ಆರಂಭ: ಬಿಜೆಪಿ ಮ್ಯಾಜಿಕ್ ನಂಬರ್ ತಲುಪುತ್ತಾ?

ವಿಧಾನ ಸಭಾ ಕಲಾಪ ಆರಂಭವಾಗಿದೆ. ಬಿಜೆಪಿ ಸರ್ಕಾರದ ಅಳಿವು-ಉಳಿವು ಇಂದು ನಿರ್ಧಾರವಾಗಲಿದೆ. ಸದನಕ್ಕೆ ಎಲ್ಲ ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ.  ಸದನದಲ್ಲಿ ಒಟ್ಟು 104 ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ. ​ ಜೆಡಿಎಸ್​​ನ ಒಟ್ಟು 37 ಸದಸ್ಯರು, ಕಾಂಗ್ರೆಸ್’  ಒಟ್ಟು 76 ಸದಸ್ಯರು ಹಾಜರಿದ್ದಾರೆ.  ಹೊಸಪೇಟೆ ಶಾಸಕ ಆನಂದ್​ ಸಿಂಗ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೈರು ಹಾಜರಾಗಿದ್ದಾರೆ. 
 

Vidhana Sabha Session begins

ಬೆಂಗಳೂರು (ಮೇ. 19): ವಿಧಾನ ಸಭಾ ಕಲಾಪ ಆರಂಭವಾಗಿದೆ. ಬಿಜೆಪಿ ಸರ್ಕಾರದ ಅಳಿವು-ಉಳಿವು ಇಂದು ನಿರ್ಧಾರವಾಗಲಿದೆ. ಸದನಕ್ಕೆ ಎಲ್ಲ ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ. 

ಸದನದಲ್ಲಿ ಒಟ್ಟು 104 ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ. ​ ಜೆಡಿಎಸ್​​ನ ಒಟ್ಟು 37 ಸದಸ್ಯರು, ಕಾಂಗ್ರೆಸ್’  ಒಟ್ಟು 76 ಸದಸ್ಯರು ಹಾಜರಿದ್ದಾರೆ.  ಹೊಸಪೇಟೆ ಶಾಸಕ ಆನಂದ್​ ಸಿಂಗ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೈರು ಹಾಜರಾಗಿದ್ದಾರೆ. 

ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು  ವಜಾಗೊಳಿಸಿದೆ.  ಬೋಪಯ್ಯ ನೇಮಕವನ್ನು ಎತ್ತಿ ಹಿಡಿದಿದೆ.  ಸುಪ್ರೀಂಕೋರ್ಟ್​ನಲ್ಲಿ ಕಾಂಗ್ರೆಸ್- ಜೆಡಿಎಸ್ ಭಾರೀ ಹಿನ್ನೆಡೆಯಾಗಿದೆ.  ಕೆ.ಜೆ. ಬೋಪಯ್ಯ ನೇಮಕಾತಿ ನಿಯಮ ಬಾಹಿರ ಅಲ್ಲ.  ಬೋಪಯ್ಯ ನೇಮಕದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾ. ಎ.ಕೆ. ಸಿಕ್ರಿ ಅಭಿಪ್ರಾಯ ಕಾಂಗ್ರೆಸ್​ ಅರ್ಜಿಯನ್ನು ಮಾನ್ಯತೆ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.  ಕೆ.ಜಿ.ಬೋಪಯ್ಯ ಉಸ್ತುವಾರಿಯಲ್ಲೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಿದೆ. 

ವಿಧಾನಸಭೆ ಸದನದ ಕಲಾಪದ ವಿಡಿಯೋ ರೆಕಾರ್ಡಿಂಗ್​​ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.  ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಶುಭ ಗಳಿಗೆ ನೋಡಿಕೊಂಡು ಸದನಕ್ಕೆ ಕಾಲಿಟ್ಟಿದ್ದಾರೆ. 

ಬಿಜೆಪಿ ಮ್ಯಾಜಿಕ್ ನಂಬರ್ 110 ತಲುಪುತ್ತಾ? ವಿಶ್ವಾಸಮತ ಯಾಚನೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. 
 

Follow Us:
Download App:
  • android
  • ios