ನೆಚ್ಚಿನ ಶಾಸಕನ ಸೋಲಿಗೆ ಬೇಸರಗೊಂಡು ಚಿಕ್ಕಮಾಲೂರು ಗ್ರಾಪಂ ಅಧ್ಯಕ್ಷ  ಭಾಸ್ಕರ್‌ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.  ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಸೋಲಿಗೆ ಕಾಂಗ್ರೆಸ್ ಬೆಂಬಲಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತುಮಕೂರು (ಮೇ. 16): ನೆಚ್ಚಿನ ಶಾಸಕನ ಸೋಲಿಗೆ ಬೇಸರಗೊಂಡು ಚಿಕ್ಕಮಾಲೂರು ಗ್ರಾಪಂ ಅಧ್ಯಕ್ಷ ಭಾಸ್ಕರ್‌ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಸೋಲಿಗೆ ಕಾಂಗ್ರೆಸ್ ಬೆಂಬಲಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಶಾಸಕ ಕೆ ಎನ್ ರಾಜಣ್ಣ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸಿ ಕ್ಷೇತ್ರದ ಚಿತ್ರಣ ಬದಲಿಸಿದ್ದರು. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಇಂತಹ ವ್ಯಕ್ತಿ ಸೋತಿರುವುದಕ್ಕೆ ಬೇಸರಗೊಂಡು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ್ ರಾಜಿನಾಮೆ ನೀಡಿದ್ದಾರೆ. 

ರಾಜಕಾರಣದಿಂದ ದೂರ ಉಳಿಯಲು ಭಾಸ್ಕರ್ ನಿರ್ಧರಿಸಿದ್ದಾರೆ.