ಬ್ರೇಕಿಂಗ್ ನ್ಯೂಸ್: ಕರ್ನಾಟಕ ಬಿಕ್ಕಟ್ಟು ಶಮನಕ್ಕೆ ಕೇಜ್ರಿವಾಲ್ ಸೂತ್ರ

Troll Delhi CM suggests a formula to solve karnataka election deadlock
Highlights

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟವನ್ನು ಇಡೇ ದೇಶವೇ ಕಣ್ಣು, ಬಾಯಿ ಬಿಟ್ಟುಕೊಂಡು ನೋಡುತ್ತಿದೆ. ಕೇವಲ 104 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸದನದಲ್ಲಿ 111 ಸಂಖ್ಯಾಬಲ ತೋರಿಸುವ ವಿಶ್ವಾಸ ವ್ಯಕ್ತಪಡಿಸುತ್ತದೆ. ಆದರದು ಹೇಗೆ ಎಂಬುವುದು ಉತ್ತರಕ್ಕೆ ನಿಲುಕದ ಗೊಂದಲವಾಗಿದೆ. ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ಸರಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. 

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟವನ್ನು ಇಡೇ ದೇಶವೇ ಕಣ್ಣು, ಬಾಯಿ ಬಿಟ್ಟುಕೊಂಡು ನೋಡುತ್ತಿದೆ. ಕೇವಲ 104 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸದನದಲ್ಲಿ 111 ಸಂಖ್ಯಾಬಲ ತೋರಿಸುವ ವಿಶ್ವಾಸ ವ್ಯಕ್ತಪಡಿಸುತ್ತದೆ. ಆದರದು ಹೇಗೆ ಎಂಬುವುದು ಉತ್ತರಕ್ಕೆ ನಿಲುಕದ ಗೊಂದಲವಾಗಿದೆ. ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ಸರಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. 

ಇಂಥ ದೊಂಬರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದು, ಎಲ್ಲರ ಮುಖದಲ್ಲಿಯೂ ನಗೆ ತರಿಸುವಂತಿದೆ. ಅವುಗಳಲ್ಲಿ ಕೆಲವ ಝಲಕ್...ಇಲ್ಲಿದೆ.

'ಬ್ರೇಕಿಂಗ್ ನ್ಯೂಸ್...


ಕರ್ನಾಟಕ ಬಿಕ್ಕಟ್ಟು ಶಮನಕ್ಕೆ ಕೇಜ್ರಿವಾಲ್ ಸೂತ್ರ. 

ಸಮ ದಿನಗಳಲ್ಲಿ ಬಿಜೆಪಿ ಸರಕಾರ, ಬೆಸ ದಿನಗಳಲ್ಲಿ ಕಾಂಗ್ರೆಸ್. 

ವೀಕೆಂಡ್ ಗಳಲ್ಲಿ ಜೆಡಿಎಸ್ ಸರಕಾರ.'


ಒಂದ್ ಐಡಿಯಾ !!!

ಸುಮ್ಮನೆ ಯಾಕೆ ಕಿತ್ತಾಟ ? 
ಮೂರು ಜನ ಸಿಎಂ ಆಗಿ ಮೂರು ಶಿಫ್ಟ್ ನಲ್ಲಿ ಕೆಲಸ ಮಾಡಿ ಬೆಂಗಳೂರು ನ ಸಿಂಗಪೋರ್ ಯಾಕೆ ಮಾಡಬಾರದು?


 

 

 

 

loader