ಮತದಾನಕ್ಕೆ ಬೆಂಗಳೂರು ಸಜ್ಜು : ಮದ್ಯ ಮಾರಾಟ ನಿಷೇಧ

karnataka-assembly-election-2018 | Friday, May 11th, 2018
Chethan Kumar
Highlights

ವಿಶೇಷ ವ್ಯವಸ್ಥೆ: ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ 100 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗುವುದು. ಅಲ್ಲಿ ಮಹಿಳಾ ಸಿಬ್ಬಂದಿಯೇ ಇರಲಿದ್ದಾರೆ. ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಮಹೇಶ್ವರ್‌ರಾವ್ ಮಾಹಿತಿ ನೀಡಿದರು.

ಬೆಂಗಳೂರು(ಮೇ.11):  ಸಿಲಿಕಾನ್ ಸಿಟಿಯಲ್ಲಿ ಮೇ.12 ಮಧ್ಯರಾತ್ರಿವರೆಗೆ ಹಾಗೂ ಮೇ 15ರಂದು  ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಪೂಜೆ ಮಾಡಿದರೆ ಕ್ರಮ :  ಮತಗಟ್ಟೆಯಿಂದ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಪ್ರಚಾರ ನಡೆಸುವಂತಿಲ್ಲ. ಮತಗಟ್ಟೆ ಬಳಿ ಪೂಜೆ ಮಾಡುವುದು, ಅಗರಬತ್ತಿ ಹಚ್ಚುವುದು, ತೆಂಗಿನಕಾಯಿ ಒಡೆಯುವುದನ್ನು ಮಾಡಿದರೆ ಆಯೋಗದ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಲಿದ್ದಾರೆ.
ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು 200 ಮೀಟರ್ ದೂರದಲ್ಲಿ ಟೇಬಲ್, ಎರಡು ಕುರ್ಚಿ ಹಾಗೂ ಸಣ್ಣ ಬ್ಯಾನರ್ ಹಾಕಿಕೊಳ್ಳಬಹುದು. ಶಾಮಿಯಾನ, ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ.
ಅಭ್ಯರ್ಥಿ, ಚುನಾವಣಾ ಏಜೆಂಟ್ ಹಾಗೂ ಕಾರ್ಯಕರ್ತರು ತಲಾ ಒಂದೊಂದು ವಾಹನ ಬಳಸಲು ಅನುಮತಿ ನೀಡಲಾಗುವುದು. ಆದರೆ, ಅದರಲ್ಲಿ ಚಾಲಕ ಸೇರಿ ಐದಕ್ಕಿಂತ ಹೆಚ್ಚು ಮಂದಿ ಇರುವಂತಿಲ್ಲ. ವಾಹನ ಬಳಕೆಗೆ ಪಡೆದಿರುವ ಅನುಮತಿ ಪತ್ರವನ್ನು ಮುಂಭಾಗದ ಗಾಜಿನ ಮೇಲೆ ಅಂಟಿಸುವುದು ಕಡ್ಡಾಯ.
ವಿಶೇಷ ವ್ಯವಸ್ಥೆ: ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ 100 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗುವುದು. ಅಲ್ಲಿ ಮಹಿಳಾ ಸಿಬ್ಬಂದಿಯೇ ಇರಲಿದ್ದಾರೆ. ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಮಹೇಶ್ವರ್‌ರಾವ್ ಮಾಹಿತಿ ನೀಡಿದರು.
ಜಯನಗರ ಕ್ಷೇತ್ರ ಹೊರತುಪಡಿಸಿ ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಶೇ.80ರಷ್ಟು ಮತಚೀಟಿ ಹಾಗೂ ವೋಟರ್‌ ಗೈಡ್ ವಿತರಣೆ ಮಾಡಲಾಗಿದೆ. ಶುಕ್ರವಾರ ಸಂಜೆಯೊಳಗೆ ಎಲ್ಲರಿಗೂ ತಲುಪಿಸುವ ಗುರಿ ಹೊಂದಿದ್ದೇವೆ. ಪ್ರತಿ ಬೂತ್‌ ಮಟ್ಟದಲ್ಲೂ ಮತದಾನದ ಚೀಟಿ ದೊರೆಯಲಿದೆ ಎಂದರು.
ಪೊಲೀಸರು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಚಾಲಕರಿಗೆ ಪೋಸ್ಟಲ್‌ ಬ್ಯಾಲೆಟ್ ಪೇಪರ್‌ (ಅಂಚೆ ಮತಪತ್ರ) ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕಾರ್ಯಾಚರಣೆ
ನೀತಿಸಂಹಿತೆ ಜಾರಿಯಾದ ದಿನನಿಂದ ಈವರೆಗೆ ವಿವಿಧ ಸ್ಕ್ವಾಡ್‌ಗಳು 6.84 ಕೋಟಿ ನಗದು, 5.29 ಕೋಟಿ ಮೌಲ್ಯದ 11,699 ಲೀಟರ್ ಮದ್ಯ ಹಾಗೂ 19,43 ಕೋಟಿ ಮೌಲ್ಯದ ಇತರೆ ಸರಕು ಜಪ್ತಿ ಮಾಡಲಾಗಿದೆ.
ಅಂಕಿ ಅಂಶ
* 431 ಬೆಂಗಳೂರಿನಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು
* 91 ಲಕ್ಷ ಮತದಾರರು
* 8,489 ಮತಗಟ್ಟೆಗಳು

ಕನ್ನಡ ಪ್ರಭಕ್ಕಾಗಿ  http://kpepaper.asianetnews.com ಕ್ಲಿಕ್ ಮಾಡಿ      

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Chethan Kumar