ಬೆಂಗಳೂರು (ಮೇ. 11): ನಾಳೆ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ  ಇಂದಿರಾ ಕ್ಯಾಂಟೀನ್ ತೆರೆಯುವುದಿಲ್ಲ. 

ಇಂದಿರಾ ಕ್ಯಾಂಟೀನ್ ಊಟ, ತಿಂಡಿ ಚುನಾವಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಪೂರೈಕೆಯಾಗಲಿದೆ. ಸಾರ್ವಜನಿಕರಿಗೆ ಸೇವೆ ಇರುವುದಿಲ್ಲ. ಇಂದಿನಿಂದಲೇ ಬೂತ್’ಗಳಿಗೆ ಇಂದಿರಾ ಕ್ಯಾಂಟೀನ್ ಊಟ ಸರಬರಾಜಾಗುತ್ತದೆ. ಸಾರ್ವಜನಿಕರು ಊಟ, ತಿಂಡಿಗೆ ಇಂದಿರಾ ಕ್ಯಾಂಟೀನ್ ನೆಚ್ಚಿಕೊಳ್ಳುವಂತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.