ಎಚ್ ಡಿಕೆ ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿದೆ ವಿಧಾನ ಸೌಧ; ಬಿಗಿ ಪೊಲೀಸ್ ಬಂದೋಬಸ್ತ್

Tight security to Vidhana Soudha
Highlights

ಇಂದು ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ  ವಿಧಾನಸೌಧ ಸಾಕ್ಷಿಯಾಗಲಿದೆ.   ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟೀಯ ನಾಯಕರು ಆಗಮಿಸುವ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತಮುತ್ತ 2500 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.  

ಬೆಂಗಳೂರು (ಮೇ. 23): ಇಂದು ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ  ವಿಧಾನಸೌಧ ಸಾಕ್ಷಿಯಾಗಲಿದೆ.   ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟೀಯ ನಾಯಕರು ಆಗಮಿಸುವ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತಮುತ್ತ 2500 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ. 

35 ಕೆಎಸ್ ಆರ್ ಪಿ, 50 ಸಿ.ಆರ್ ತುಕಡಿಗಳು,  8 ಡಿಸಿಪಿ . 2 ಹೆಚ್ಚುವರಿ ಆಯುಕ್ತರು 100 ಇನ್ಸ್‌ಪೆಕ್ಟರ್, 30ಎಸಿಪಿ ಸೇರಿದಂತೆ 2500 ಪೊಲೀಸರಿಂದ  ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.  

ಹೆಚ್ ಡಿಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ.  ಈ  ಹಿನ್ನಲೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು 3000 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ಪ್ರಮಾಣವಚನ ಕಾರ್ಯಕ್ರಮಕ್ಕೆ ನಗರಕ್ಕೆ ಬರುವ 2000 ,ಬಸ್’ಗಳಿಗೆ ಪ್ಯಾಲೇಸ್ ಗ್ರೌಂಡ್’ನಲ್ಲಿ, ಕಂಠೀರವ ಸ್ಟೇಡಿಯಂ, ಯುಬಿ ಸಿಟಿಯಲ್ಲಿಯೂ ವಾಹನಗಳ‌ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.  ವಿವಿಐಪಿಗಳು ಹಾಗೂ ಪಾಸ್ ಹೊಂದಿದವರಿಗೆ ವಿಧಾನಸೌಧದ ಒಳಗಡೆಯೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.  ಪ್ರಮಾಣವಚನ ಕಾರ್ಯಕ್ರಮಕ್ಕೆ ಡ್ರೋನ್ ಕ್ಯಾಮೆರಾಗಳನ್ನು  ನಿಷೇಧ ಮಾಡಲಾಗಿದೆ. 
 

loader