ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಬೆದರಿಕೆ ಕರೆ

First Published 30, Apr 2018, 10:31 AM IST
Threat call to Varuna Constituency BJP Candidate
Highlights

ಬಿ.ವೈ.ವಿಜಯೇಂದ್ರಗೆ ವರುಣ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಬೆದರಿಕೆ ಕರೆಗಳಿಂದ ಹೈರಾಣಾಗಿದ್ದಾರೆ. 

ಮೈಸೂರು (ಏ. 30): ಬಿ.ವೈ.ವಿಜಯೇಂದ್ರಗೆ ವರುಣ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಬೆದರಿಕೆ ಕರೆಗಳಿಂದ ಹೈರಾಣಾಗಿದ್ದಾರೆ. 

ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಲು ನೀನೇ ಕಾರಣ ಅಂತ ಏಕವಚನದಲ್ಲಿ ನಿಂದಿಸಿದ್ದಾರೆ.  ಗ್ರಾಮಗಳಿಗೆ ಭೇಟಿ ನೀಡಿದರೆ ಹೊಡೆದು ಕಳುಹಿಸುತ್ತೇವೆ ಎಂದು ಅನಾಮಧೇಯ ವ್ಯಕ್ತಿಗಳು ಹೆದರಿಸುತ್ತಿದ್ದಾರೆ.  ಬೆದರಿಕೆ ಕರೆಗಳಿಂದ ಬೆಸ್ತು ಬಿದ್ದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಟಿ.ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರವಾಣಿ ಕರೆಯ ಕಾಲ್ ರೆಕಾರ್ಡಿಂಗ್ ಸಮೇತ ಲಿಖಿತ ದೂರು ದಾಖಲು ಮಾಡಿದ್ದಾರೆ. 

ಶಿಸ್ತು ಕ್ರಮ ಕೈಗೊಳ್ಳುವುದು ಬೇಡ. ಎಚ್ಚರಿಕೆ ನೀಡಿ ಎಂದು ಬಸವರಾಜು ಮನವಿ ಮಾಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧವೂ ತೋಟದಪ್ಪ ಸಾಫ್ಟ್ ಕಾರ್ನರ್ ತೋರಿದ್ದಾರೆ. 

loader