ಚಾಮರಾಜನಗರದಲ್ಲಿ ಅಭ್ಯರ್ಥಿಗಳ ಓಟು ಅಭ್ಯರ್ಥಿಗಳಿಗೇ ಇಲ್ಲದಂತಾಗಿದೆ.  ಮೂವರು ಪ್ರಮುಖ ಅಭ್ಯರ್ಥಿಗಳಿಗೆ ತಮ್ಮ ಓಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಂತಾಗಿದೆ.  ಅಂತಹ ಅಭ್ಯರ್ಥಿಗಳು ಯಾರು..?

ಚಾಮರಾಜನಗರ : ಚಾಮರಾಜನಗರದಲ್ಲಿ ಅಭ್ಯರ್ಥಿಗಳ ಓಟು ಅಭ್ಯರ್ಥಿಗಳಿಗೇ ಇಲ್ಲದಂತಾಗಿದೆ. ಮೂವರು ಪ್ರಮುಖ ಅಭ್ಯರ್ಥಿಗಳಿಗೆ ತಮ್ಮ ಓಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಂತಾಗಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮೂವರು ಅಭ್ಯರ್ಥಿಗಳಾದ ಕಾಂಗ್ರೆಸ್ ನ ಸಿ.ಪುಟ್ಟರಂಗಶೆಟ್ಟಿ, ಹಾಗೂ ಬಿಜೆಪಿಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಹಾಗೂ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ತಮ್ಮ ಓಟುಗಳನ್ನು ತಾವೇ ಹಾಕಿಕೊಳ್ಳಲಾಗದಂತಹ ಸ್ಥಿತಿ ಇದೆ.

ಅವರು ಸ್ಪರ್ಧೆ ಮಾಡಿರುವ ಕ್ಷೇತ್ರದ ವಾಸಿಯಾಗಿಲ್ಲದ ಕಾರಣದಿಂದ ಅವರು ತಮ್ಮ ಓಟನ್ನು ತಾವೇ ಹಾಕಿಕೊಳ್ಳದೇ ಬೇರೆ ಅಭ್ಯರ್ಥಿಗಳಿಗೆ ಹಾಕಬೇಕಿದೆ.

ಮೂವರ ಹೆಸರು ಬೇರೆ ಬೇರೆ ಕ್ಷೇತ್ರಗಳ ಮತಗಟ್ಟೆಯಲ್ಲಿದ್ದು, ಅಲ್ಲಿಯೇ ಅವರು ಮತ ಹಾಕಬೇಕಿದೆ. ಅನೇಕ ಅಭ್ಯರ್ಥಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಅವರೆಲ್ಲರಿಗೂ ಕೂಡ ಇದೇ ರೀತಿ ತಮ್ಮ ವೋಟನ್ನು ತಾವೇ ಹಾಕಿಕೊಳ್ಳಲು ಸಾಧ್ಯವಿಲ್ಲ.