ಬಳ್ಳಾರಿ[ಮೇ.10]: ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಪರವಾಗಿ ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಮತಯಾಚನೆ ನಡೆಸಿದ್ದಾರೆ.
ರೋಡ್ ಶೋ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಮನೆ-ಮನೆ ಪ್ರಚಾರ ನಡೆಸಿದ ಅಜರುದ್ದೀನ್, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೋಟ್ ಬ್ಯಾನ್ ಹಾಗೂ ಜಿಎಸ್’ಟಿ ಜನರಿಗೆ ಸಂಕಷ್ಟ ತಂದಿದೆ. ಜೆಡಿಎಸ್ ಮತ ಒಡೆಯುವ ಕೆಲಸ ಮಾಡುತ್ತದೆ. ಆ ಪಕ್ಷಕ್ಕೆ ಮತ ನೀಡಬೇಡಿ, ಬಿಜೆಪಿಯಿಂದ ಯಾರಿಗೂ ಲಾಭವಿಲ್ಲ. ಬಿಜೆಪಿಗೆ ಮತ ನೀಡಿದರೆ ಬಡವರು-ಶ್ರೀಮಂತರು ಎನ್ನದೇ ಎಲ್ಲರೂ ತೊಂದರೆಗೆ ಸಿಲುಕುತ್ತಾರೆ. ಸುಭದ್ರ ಕರ್ನಾಟಕಕ್ಕೆ ಕಾಂಗ್ರೆಸ್’ಗೆ ಮತ ಹಾಕಿ, ಬಹುಮತದಿಂದ ಕಾಂಗ್ರೆಸ್ ಆಯ್ಕೆ ಮಾಡಿ, ಅನಿಲ್ ಲಾಡ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಜರುದ್ದೀನ್ 2009ರಲ್ಲಿ ಉತ್ತರಪ್ರದೇಶದ ಮೊರಾದಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.