ಸದಾನಂದ ಗೌಡರ ಮುಖದ ಮೇಲೆ ಮತ್ತೆ ಮಂದಹಾಸ

karnataka-assembly-election-2018 | Tuesday, May 15th, 2018
Shrilakshmi Shri
Highlights

ಇದುವರೆಗಿನ ಅಂಕಿ-ಅಂಶಗಳ ಪ್ರಕಾರ ಬಿಜೆಪಿ ಮ್ಯಾಜಿಕ್ ನಂ 113 ರತ್ತ ದಾಪುಗಾಲು ಹಾಕುತ್ತಿದೆ. ಬಿಎಸ್ ವೈ ಸಿಎಂ ಆಗುವ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿದೆ. ಸದ್ಯದ ಸ್ಥಿತಿ ನೋಡಿದರೆ  ಅತಂತ್ರ ಸರ್ಕಾರವಲ್ಲ, ಸ್ವತಂತ್ರ ಸರ್ಕಾರವಾಗುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರು ನಗರದಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ.  
 

ಬೆಂಗಳೂರು (ಮೇ. 15): ಇದುವರೆಗಿನ ಅಂಕಿ-ಅಂಶಗಳ ಪ್ರಕಾರ ಬಿಜೆಪಿ ಮ್ಯಾಜಿಕ್ ನಂ 113 ರತ್ತ ದಾಪುಗಾಲು ಹಾಕುತ್ತಿದೆ. ಬಿಎಸ್ ವೈ ಸಿಎಂ ಆಗುವ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿದೆ. ಸದ್ಯದ ಸ್ಥಿತಿ ನೋಡಿದರೆ  ಅತಂತ್ರ ಸರ್ಕಾರವಲ್ಲ, ಸ್ವತಂತ್ರ ಸರ್ಕಾರವಾಗುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರು ನಗರದಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ.  

ಬೆಂಗಳೂರು ನಗರದ 26 ಕ್ಷೇತ್ರಗಳಲ್ಲಿ 15 ಬಿಜೆಪಿ, 9 ಕಾಂಗ್ರೆಸ್, 2 ಜೆಡಿಎಸ್ ಮುನ್ನಡೆ ಸಾಧಿಸಿದೆ.  ಉತ್ತರ ಕನ್ನಡದ 6 ಸ್ಥಾನಗಳ ಪೈಕಿ 5 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.  ಉಡುಪಿಯಲ್ಲಿ 5 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಿಜೆಪಿ ಹಿರಿಯ ನಾಯಕ ಸದಾನಂದ ಗೌಡ, ನಾವು ಮ್ಯಾಜಿಕ್ ನಂ ತಲುಪುತ್ತೇವೆ. ಬಿಎಸ್ ವೈ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡುತ್ತೇವೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಬೀಳುವುದಿಲ್ಲ. ನಾವೇ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Shrilakshmi Shri