ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಇರುವುದು ನಿಜ : ಶರವಣ

karnataka-assembly-election-2018 | Sunday, April 29th, 2018
Suvarna Web Desk
Highlights

ಜೆಡಿಎಸ್ ಈ ಬಾರಿ ಶತಾಯಗತಾಯ ಅಧಿಕಾರ ಗದ್ದುಗೇರಲು ರಣತಂತ್ರ ರೂಪಿಸಿದೆ. ನಗರದಲ್ಲಿ ಕುಸಿಯುತ್ತಿರುವ ಪಕ್ಷದ ಬಲವನ್ನು ಹೆಚ್ಚಿಸಿ ಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ.  ಸಂವಾದದ ಅಂಶಗಳನ್ನೇ ಪ್ರಚಾರದಲ್ಲಿ ಬಳಸಿಕೊಂಡು ಜನರನ್ನು ಆಕರ್ಷಿಸುವ ಪ್ರಯತ್ನಕ್ಕೆ ಮುಂದಾಗಿದೆ. ಪಕ್ಷದ ಪ್ರಚಾರ ಕುರಿತು ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರೊಂದಿಗೆ ನಡೆಸಿರುವ ಸಂದರ್ಶನ ಹೀಗಿದೆ. 

ಪ್ರಭುಸ್ವಾಮಿ ನಟೇಕರ್

ಬೆಂಗಳೂರು : ಕಳೆದ 10 ವರ್ಷದಿಂದ ಅಧಿಕಾರದಿಂದ ದೂರ ಉಳಿದಿದ್ದ ಜೆಡಿಎಸ್ ಈ ಬಾರಿ ಶತಾಯಗತಾಯ ಅಧಿಕಾರ ಗದ್ದುಗೇರಲು ರಣತಂತ್ರ ರೂಪಿಸಿದೆ. ನಗರದಲ್ಲಿ ಕುಸಿಯುತ್ತಿರುವ ಪಕ್ಷದ ಬಲವನ್ನು ಹೆಚ್ಚಿಸಿ ಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ. ಮತದಾರರನ್ನು ಸೆಳೆಯಲು ಸಂವಾದಗಳನ್ನು ನಡೆಸುವ ಮೂಲಕ ಪಕ್ಷದ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗಿದೆ. ಸಂವಾದದ ಅಂಶಗಳನ್ನೇ ಪ್ರಚಾರದಲ್ಲಿ ಬಳಸಿಕೊಂಡು ಜನರನ್ನು ಆಕರ್ಷಿಸುವ ಪ್ರಯತ್ನಕ್ಕೆ ಮುಂದಾಗಿದೆ. ಪಕ್ಷದ ಪ್ರಚಾರ ಕುರಿತು ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರೊಂದಿಗೆ ನಡೆಸಿರುವ ಸಂದರ್ಶನ ಹೀಗಿದೆ. 

ಚುನಾವಣಾ ಪ್ರಚಾರಕ್ಕೆ ಮತದಾರರನ್ನು ಪಕ್ಷವು ಯಾವ ರೀತಿ ಕಾರ್ಯತಂತ್ರ ರೂಪಿಸಿದೆ?

ಜೆಡಿಎಸ್‌ಗೆ ಕಾರ್ಯಕರ್ತರೇ ಆಸ್ತಿಯಾಗಿದ್ದು, ತಳಮಟ್ಟದಿಂದ ಶ್ರಮವಹಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾದಂತೆ ಪಕ್ಷವು ಪ್ರಚಾರದ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುತ್ತಿದೆ. ಡಿಜಿಟಲ್ ತಂತ್ರಜ್ಞಾನ ಮೂಲಕ ಪ್ರಚಾರ ಕಾರ್ಯ ಕೈಗೊಂಡಿದ್ದು, ಪಕ್ಷದ ಕಾರ್ಯಕರ್ತರು ಜನರನ್ನು ತಲುಪುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ಹಾಕುತ್ತಿರುವ ಕಾರ್ಯಕರ್ತರ ಬೆವರಿಗೆ ನಾವಣೆಯಲ್ಲಿ
ತಕ್ಕ ಪ್ರತಿಫಲ ಸಿಗಲಿದೆ.

ಪಕ್ಷದಲ್ಲಿನ ಬಂಡಾಯ ಭುಗಿಲೆದ್ದಿದೆ. ಇದನ್ನೆಲ್ಲಾ ಶಮನ ಮಾಡಲಾಗಿದೆಯೇ?

ಟಿಕೆಟ್ ಸಿಗದ ಕಾರಣ ಕೆಲವರು ಅಸಮಾಧಾನಗೊಂಡಿರುವುದು  ನಿಜ. ಆದರೆ, ಪಕ್ಷವು ತಾಯಿ ಇದ್ದಂತೆ. ಟಿಕೆಟ್ ಸಿಗದ ಕಾರಣಕ್ಕೆ ಪಕ್ಷಕ್ಕೆ ದ್ರೋಹ ಬಗೆಯಬಾರದು. ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದವರ ಮನವೊಲಿಕೆ ಮಾಡಿ ಹಿಂಪಡೆಯಲಾಗಿದೆ. ಅವರೆಲ್ಲಾ ಪಕ್ಷದ ಪರವಾಗಿ ಕೆಲಸ ಮಾಡಿ ಜೆಡಿಎಸ್ ಅಧಿಕಾರಕ್ಕೆ ತರುವಲ್ಲಿ ಕೆಲಸ ಮಾಡಲಿದ್ದಾರೆ. 

 ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಬೆಂಗಳೂರು ಅಭಿವೃದ್ಧಿ, ಕಾನೂನು ಸುವ್ಯವಸ್ಥೆಗಾಗಿ ಕಾರ್ಯತಂತ್ರಗಳೇನು?

ಬೆಂಗಳೂರಿನ ಹೆಸರಿಗೆ ಕಳಂಕ ತರುವಂತೆ ಆಡಳಿತ ನಡೆಸಿವೆ. ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಅಪರಾಧ ಸಂಖ್ಯೆ ಇಳಿಕೆ ಮಾಡುವ ಸಂಬಂಧ ಪೊಲೀಸರ ಜತೆಗೆ ಕೆಲವು ಸಂಘಟನೆಗಳು ಕೆಲಸ ಮಾಡಲಿವೆ. ಸ್ನೇಹಯುತವಾಗಿ ಕೆಲಸ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಅಲ್ಲದೇ, ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು.

ಒಕ್ಕಲಿಗ ಮಹಾಸಂಸ್ಥಾನ ಸ್ವಾಮೀಜಿ ಅವ ರನ್ನು ಚುನಾವಣಾ ಕಣಕ್ಕೆ ಇಳಿಸುವಲ್ಲಿ ವೈಯಕ್ತಿಕ ಆಸಕ್ತಿ ತೋರಿದ್ದೀರಿ ಎಂಬ ಮಾತುಗಳು ಕೇಳಿ ಬಂದಿವೆ?

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಕ್ಕಲಿಗ ಮಹಾಸಂಸ್ಥಾನ ಚಂದ್ರಶೇಖರ ನಾಥ ಸ್ವಾಮೀಜಿ ಚುನಾವಣಾ ಕಣಕ್ಕಿಳಿಯಬೇಕು ಎಂದು ಹಲವರ ಒತ್ತಾಯ ಇತ್ತು. ಹೀಗಾಗಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತೇ ಹೊರತು ನನ್ನ ಆಸಕ್ತಿಯಿಂದ ಹೋಗಿ ಭೇಟಿ ಮಾಡಿಲ್ಲ. ಇದು ಸುಳ್ಳು ಸುದ್ದಿ. ಸ್ವಾಮೀಜಿ ಸಹ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ತೀರ್ಮಾನವೇ ಅಂತಿಮ ಹೇಳಿದ್ದರು. ದೇವೇಗೌಡ ಅವರು ತಪ್ಪು ಸಂದೇಶ ಹೋಗಬಾರದು ಎಂದು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ.

 ಬೆಂಗಳೂರು ನಗರ ಜಿಲ್ಲಾಧ್ಯಕ್ಷರು ಗೆಲ್ಲುವ ಅಭ್ಯರ್ಥಿಯಲ್ಲಎಂಬ ಕಾರಣಕ್ಕಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಟಿಕೆಟ್ ನೀಡಿಲ್ಲ ಎಂಬ ಆರೋಪಕ್ಕೆ ನಿಮ್ಮ ಅಭಿಪ್ರಾಯ?

ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್ ಅವರು ಸಹ ಗೆಲ್ಲುವ ಅಭ್ಯರ್ಥಿ. ಆದರೆ, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅವರ ಪಾತ್ರ ಬಹಳ ಮುಖ್ಯವಾದುದು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಟಿಕೆಟ್ ನೀಡಿದರೆ ಕೇವಲ ಆ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಗಮನ ಕೊಡುತ್ತಿದ್ದರು. ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಇಡೀ ನಗರಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಓಡಾಡಿ ಪಕ್ಷಕ್ಕೆ ಅಧಿಕಮತ ತಂದುಕೊಡುವಲ್ಲಿ ಅವರ ಶ್ರಮ ಅತ್ಯಗತ್ಯವಾಗಿ ಬೇಕಾಗಿದೆ. ಅವರಿಗೆ ಮುಂದಿನ ದಿನದಲ್ಲಿ ಒಳ್ಳೆಯ ಸ್ಥಾನ-ಮಾನ ಸಿಗಲಿ

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk