ಕಾಂಗ್ರೆಸ್ ಗೆ ಮತಹಾಕದಿರಲು ಸ್ವಾಮೀಜಿಗಳ ನಿರ್ಧಾರ

First Published 4, May 2018, 9:42 AM IST
Swamiji Decides not Vote for Congress
Highlights

ಕಾಂಗ್ರೆಸ್ ಗೆ ಮತಹಾಕದಿರಲು ಹಿಂದುಳಿದ ವರ್ಗಗಳ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ.  ಶಿರಾ ತಾಲೂಕಿನ ಮಾಗೋಡಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸ್ವಾಮಿಜಿ ಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  

ಬೆಂಗಳೂರು (ಮೇ. 04): ಕಾಂಗ್ರೆಸ್ ಗೆ ಮತಹಾಕದಿರಲು ಹಿಂದುಳಿದ ವರ್ಗಗಳ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ. 

ಶಿರಾ ತಾಲೂಕಿನ ಮಾಗೋಡಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸ್ವಾಮಿಜಿ ಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ,  ಮಡಿವಾಳ ಮಾಚಿದೇವ ಶ್ರೀಗಳು  ಹಾಗೂ ಸಂಗಣ್ಣ ಬಸವಾನಂದ ಸ್ವಾನಿಜಿಗಳು ‌ಸಭೆಯಲ್ಲಿ‌ ಭಾಗಿಯಾಗಿದ್ದಾರೆ. 

ಸಭೆ ಬಳಿಕ ಪಕ್ಷೇತರ ಅಭ್ಯರ್ಥಿ ಸಿ.ಎಂ. ನಾಗರಾಜು ಪರ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಅಹಿಂದ ವರ್ಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ.  ಅಧಿಕಾರಕ್ಕೆ ಬರುವವರೆಗೆ ಮಾತ್ರ ಅಹಿಂದ ಮಂತ್ರ ಜಪಿಸಿದ್ರು.  ಬಳಿಕ ಅಹಿಂದ ವರ್ಗವನ್ನ ಸಂಪೂರ್ಣ ಮರೆತರು.  ಅಹಿಂದ ವರ್ಗಕ್ಕೆ ಇನ್ನೂ ಅನ್ಯಾಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಹಿಂದುಳಿದ ವರ್ಗಗಳ ಸ್ವಾಮೀಜಿಗಳು ನಡೆಯಿಂದ ‌ಸಚಿವ ಜಯಚಂದ್ರಗೆ ಸಂಕಷ್ಟ ಎದುರಾಗಿದೆ.  

loader