ಶ್ರೀರಾಮುಲು ಪರ ನಾಳೆಯಿಂದ ಸುದೀಪ್ ಪ್ರಚಾರ

Sudeep Campaign by tomorrow
Highlights

ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇನೆಂದು ಹೇಳಿದ್ದ ನಟ ಸುದೀಪ್ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಯೂ ಟರ್ನ್ ಹೊಡೆದಿದ್ದಾರೆ. ಸಿಎಂ ಪರವಾಗಿಯಲ್ಲ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ನಾಳೆಯಿಂದ ಪ್ರಚಾರ ನಡೆಸಲಿದ್ದಾರೆ. 

ಬಳ್ಳಾರಿ (ಮೇ. 06): ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇನೆಂದು ಹೇಳಿದ್ದ ನಟ ಸುದೀಪ್ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಯೂ ಟರ್ನ್ ಹೊಡೆದಿದ್ದಾರೆ. ಸಿಎಂ ಪರವಾಗಿಯಲ್ಲ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ನಾಳೆಯಿಂದ ಪ್ರಚಾರ ನಡೆಸಲಿದ್ದಾರೆ. 

ನಾಳೆ ಬೆಳಿಗ್ಗೆ 10 ಗಂಟೆಗೆ ಮೊಳಕಾಲ್ಮೂರು ಕ್ಷೇ ತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.  ಮಧ್ಯಾಹ್ನ 2 ಗಂಟೆಗೆ ಬಳ್ಳಾರಿ ಗ್ರಾಮಾಂತರ ಹಾಗೂ ಬಳ್ಳಾರಿ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಎಸ್.ಫಕ್ಕಿರಪ್ಪ ಮತ್ತು ಜಿ.ಸೋಮಶೇಖರ್ ರೆಡ್ಡಿ ಅವರ ಪರ ರೋಡ್ ಶೋ, ಬಹಿರಂಗ ಸಭೆ ನಡೆಸಲಿದ್ದಾರೆ. 

ಶ್ರೀರಾಮುಲು ಪ್ರೀತಿ, ವಿಶ್ವಾಸಕ್ಕಾಗಿ ಪ್ರಚಾರ ನಡೆಸುತ್ತಿದ್ದೆನೆಯೇ ಹೊರತು ಯಾವುದೇ ಪಕ್ಷದ ಪರ ಅಲ್ಲ ಎಂದು ನಟ ಸುದೀಪ್​ ಸ್ಪಷ್ಟನೆ ನೀಡಿದ್ದಾರೆ. 

loader