ನಮ್ಮ ಸಮಾಜದ ಸುದೀಪ್ ನನ್ನನ್ನು ಗೆಲ್ಲಿಸಲಿ : ಶ್ರೀ ರಾಮುಲು

Sudeep Belongs To Our Community He Support Me Says Sriramulu
Highlights

ನಟ ಸುದೀಪ್ ನಮ್ಮ ಸಮಾಜದವರು, ಅವರ ಮೇಲೆ ನಮಗೆ ಗೌರವ ಇದೆ. ನನ್ನನ್ನು ಗೆಲ್ಲಿಸಲು ನಮ್ಮ ಸಮಾಜದವರಾದ ಅವರು ಮುಂದಾಗಬೇಕು ಎಂದು ಮಾಜಿ ಸಂಸದ ಶ್ರೀರಾಮುಲು ಹೇಳಿದರು.

ಕೊಳ್ಳೇಗಾಲ: ನಟ ಸುದೀಪ್ ನಮ್ಮ ಸಮಾಜದವರು, ಅವರ ಮೇಲೆ ನಮಗೆ ಗೌರವ ಇದೆ. ನನ್ನನ್ನು ಗೆಲ್ಲಿಸಲು ನಮ್ಮ ಸಮಾಜದವರಾದ ಅವರು ಮುಂದಾಗಬೇಕು ಎಂದು ಮಾಜಿ ಸಂಸದ ಶ್ರೀರಾಮುಲು ಹೇಳಿದರು.

ಶುಕ್ರವಾರ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಚಿತ್ರನಟ ಸುದೀಪ್‌ಗೆ ನಾವೆಲ್ಲರೂ ಅಭಿಮಾನಿಗಳು. ಅವರು ನಮ್ಮ (ವಾಲ್ಮೀಕಿ) ಸಮಾಜದ ಹಿರಿಯ ಕಲಾವಿದರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು. 

ಸಿದ್ದು ಪರ ಸುದೀಪ್ ಪ್ರಚಾರ ಬೇಡ: ಸುದೀಪ್ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಇದರಿಂದ ನಮ್ಮ ಪಂಗಡಕ್ಕೆ ಸೇರಿದ ಶ್ರೀರಾಮುಲು ಅವರಿಗೆ ಹೊಡೆತವಾಗಲಿದ್ದು, ಸಿದ್ದು ಪರ ಪ್ರಚಾರ ನಡೆಸಬಾರದು ಎಂದು ಬಾದಾಮಿಯಲ್ಲಿ ವಾಲ್ಮೀಕಿ ಜನಾಂಗದ ಮುಖಂಡರು ಹೇಳಿದ್ದಾರೆ. 

loader