ಚಿಕ್ಕಮಗಳೂರು : ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಇನ್ನೇನು ಕದನ ಕುತೂಹಲಕ್ಕೆ ತೆರೆ ಬೀಳಲು ಕೆಲವೇ ದಿನ ಉಳಿದಿದೆ.ವಿವಿಧ ಅಭ್ಯರ್ಥಿಗಳು, ವಿವಿಧ ಪಕ್ಷದ ನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 

ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಮತದಾರರನ್ನು ಸೆಳೆಯಲು ಪ್ರಚಾರ ಕಾರ್ಯ ಕೈಗೊಂಡಿದ್ದು, ಚಿಕ್ಕಮಗಳೂರಿನಲ್ಲಿ  ವಿದ್ಯಾರ್ಥಿಯೋರ್ವಳು ತಾನು ಕೂಡಿಟ್ಟ ಹಣವನ್ನು  ಕುಮಾರಸ್ವಾಮಿ ಅವರಿಗೆ  ನೀಡಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಹೇಳಿದ್ದಾಳೆ.

ಏಳನೇ ತರಗತಿ ವಿಧ್ಯಾರ್ಥಿನಿ ಒಂದು, ಎರಡು, ಐದು ರೂಪಾಯಿ ನಾಣ್ಯಗಳ ಎರಡು ಸಾವಿರ ಹಣವನ್ನ ಕೂಡಿಟ್ಟು ಚುನಾವಣೆಯ ಖರ್ಚಿಗಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ನೀಡಿದ್ದಾಳೆ. 

ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಹರೀಶ್ ಪರ ಮತಯಾಚನೆಗೆ  ಹೆಚ್.ಡಿಕೆ ಆಗಮಿಸಿದ್ದ ವೇಳೆ ಅವರು ಭಾಷಣ ಮಾಡುವಾಗ ವೇದಿಕೆ ಮೇಲೆ ಬಂದು ವಿದ್ಯಾರ್ಥಿನಿ ಹಣ ನೀಡಿದ್ದಾಳೆ. 

ಇದೇ ವೇಳೆ, ಹೆಚ್.ಡಿ ಕೆ ಚಿಕ್ಕಬಳ್ಳಾಪುರದಲ್ಲಿಯೂ ಕೂಡ ನಾಲ್ಕು ಮಕ್ಕಳು ಹಣವನ್ನ ತಂದು ಕೊಟ್ಟಿದ್ದನ್ನ ನೆನಪು ಮಾಡಿಕೊಂಡು ಇದೇ ನನ್ನ ಆಸ್ತಿ ಎಂದು ಮತದಾರರಿಗೆ ನನ್ನನ್ನ ಮರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.