ಸಿಎಂ ಪರ ಸ್ಟಾರ್ ಕ್ಯಾಂಪೇನ್; ಬಾಲಿವುಡ್ ನಟ ರಾಜ್ ಬಬ್ಬರ್ ಮತಯಾಚನೆ

First Published 4, May 2018, 1:24 PM IST
Star Campaign to CM Siddaramaiah
Highlights

ಸಿಎಂ ಸಿದ್ದರಾಮಯ್ಯ ಪರ ಸ್ಟಾರ್‌ ನಟರು ಇಂದು ಕ್ಯಾಂಪೇನ್ ಮಾಡಿದ್ದಾರೆ.  ಬಾಲಿವುಡ್ ನಟ ರಾಜ್ ಬಬ್ಬರ್‌  ಮೈಸೂರಿನ ಭಾರತ್‌ನಗರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದಾರೆ. ರಾಜ್‌ ಬಬ್ಬರ್‌ಗೆ ರಾಜೇಂದ್ರ ಸಿಂಗ್ ಬಾಬು ಹಾಗೂ ಪುತ್ರಿ ರಿಷಿಕಾ ಸಿಂಗ್ ಸಾಥ್ ನೀಡಿದ್ದಾರೆ. 
 

ಮೈಸೂರು (ಮೇ. 04): ಸಿಎಂ ಸಿದ್ದರಾಮಯ್ಯ ಪರ ಸ್ಟಾರ್‌ ನಟರು ಇಂದು ಕ್ಯಾಂಪೇನ್ ಮಾಡಿದ್ದಾರೆ.  ಬಾಲಿವುಡ್ ನಟ ರಾಜ್ ಬಬ್ಬರ್‌  ಮೈಸೂರಿನ ಭಾರತ್‌ನಗರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದಾರೆ. ರಾಜ್‌ ಬಬ್ಬರ್‌ಗೆ ರಾಜೇಂದ್ರ ಸಿಂಗ್ ಬಾಬು ಹಾಗೂ ಪುತ್ರಿ ರಿಷಿಕಾ ಸಿಂಗ್ ಸಾಥ್ ನೀಡಿದ್ದಾರೆ. 

ನಟ ಮದನ್ ಪಟೇಲ್‌ ಕೂಡಾ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದ್ದಾರೆ. 
ಚಾಮುಂಡೇಶ್ವರಿ ಸಿದ್ದರಾಮಯ್ಯ  ಕ್ಷೇತ್ರವಲ್ಲ.  ಇದು ಕುಟುಂಬ ಇದ್ದ ಹಾಗೆ. ಇಲ್ಲಿನ ಜನರು ಸಿದ್ದರಾಮಯ್ಯರ ಕುಟುಂಬಸ್ಥರ ಹಾಗೇ ಇದ್ದಾರೆ. ಸಿದ್ದರಾಮಯ್ಯರ ಅನ್ನಭಾಗ್ಯ, ಕ್ಷೀರಭಾಗ್ಯ, ಹಾಗೂ ಇತರೆ ಭಾಗ್ಯಗಳು ಜನರನ್ನ ತಲುಪಿದೆ ಎಂದು ರಾಜ್ ಬಬ್ಬರ್ ಹೇಳಿದ್ದಾರೆ. 

ಪತ್ರಿಕೆಯಲ್ಲಿ ದೇವೆಗೌಡರ ವರದಿಯೊಂದನ್ನ ಓದಿದೆ‌. ಅವರು ಬಿಜೆಪಿ ಕಾಲೆಳೆದರೆ, ಬಿಜೆಪಿಯವರು ಜೆಡಿಎಸ್ ಕಾಲೆಳೆದಿದ್ದಾರೆ‌. ಬಿಜೆಪಿ ಸ್ಟಾರ್ ಕ್ಯಾಂಪೇನರ್ ಯೋಗಿ ಇಲ್ಲಿಗೆ ಬಂದಿದ್ದಾರೆ. ಅವರನ್ನ ನೋಡಿದ್ರೆ ಯಾರು ಓಟು ಹಾಕಲ್ಲ.  ಈ ರಾಜ್ಯಕ್ಕೆ ಸಿದ್ದರಾಮಯ್ಯರ ಅವಶ್ಯಕತೆ ಇದೆ. ಹೀಗಾಗಿ ಜನ ಇಲ್ಲಿ ಸಿದ್ದರಾಮಯ್ಯರನ್ನ ಗೆಲ್ಲಿಸಿ ಕಳುಹಿಸುತ್ತಾರೆ ಎಂದು  ರಾಜ್ ಬಬ್ಬರ್ ಹೇಳಿದ್ದಾರೆ. 
 

loader