ಕಾಂಗ್ರೆಸ್’ನವರ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತೇವೆ: ಶ್ರೀರಾಮುಲು

karnataka-assembly-election-2018 | Sunday, May 20th, 2018
Suvarna Web Desk
Highlights

ಬಿಜೆಪಿ 104 ಸ್ಥಾನಗಳನ್ನು ಗೆದ್ದಿದ್ದರೂ ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಸೋತಿದ್ದೇವೆ. ಬಿಎಸ್ ವೈ ರಾಜೀನಾಮೆ ನೀಡಿದ್ದಾರೆ.   ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಜನಾದೇಶ ನಮ್ಮ ಕಡೆಯೇ ಇದೆ ಎಂದು ಶ್ರೀರಾಮುಲು ಹೇಳಿದ್ದಾರೆ.  

ಬಳ್ಳಾರಿ (ಮೇ. 20):  ಬಿಜೆಪಿ 104 ಸ್ಥಾನಗಳನ್ನು ಗೆದ್ದಿದ್ದರೂ ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಸೋತಿದ್ದೇವೆ. ಬಿಎಸ್ ವೈ ರಾಜೀನಾಮೆ ನೀಡಿದ್ದಾರೆ.   ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಜನಾದೇಶ ನಮ್ಮ ಕಡೆಯೇ ಇದೆ ಎಂದು ಶ್ರೀರಾಮುಲು ಹೇಳಿದ್ದಾರೆ. 

ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಾವೆಲ್ಲಾ  ಜೈಲಿಗೆ ಹೋಗ್ತೆವೆ ಎಂಬ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.  ಎಚ್ ಡಿಕೆಗೆ ಸಿಎಂ ಮಾಡಲು ಅನುಕೂಲ ಮಾಡಿದ್ದಾರೆ ಎಂದಿದ್ದಾರೆ.  

ನಾವು ಕಾಂಗ್ರೆಸ್’ನವರನ್ನು ಮಲಗೋಕೆ ಬಿಡಲ್ಲ. ಅವರ ಭ್ರಷ್ಟಾಚಾರ, ಅಕ್ರಮಗಳನ್ನು ಎತ್ತಿ ಹಿಡಿಯುತ್ತೇವೆ.  ದಿನದ 24 ತಾಸು ಅವರನ್ನು ಕಾಯುತ್ತೇವೆ.  ಈಗಾಗಲೇ ಒಳ ಜಗಳ ಅವರಲ್ಲಿ ಪ್ರಾರಂಭವಾಗಿದೆ. ಮಂತ್ರಿಗಿರಿಗಾಗಿ ಒಳ‌ಜಗಳ ಆರಂಭವಾಗಿದೆ. ಕುಮಾರಸ್ವಾಮಿಯನ್ನು  ಬೇಷರತ್ ಆಗಿ ಸಿಎಂ ಮಾಡಲು ಒಪ್ಪಿದ್ದಾರೆ.   ಅವರ ಭ್ರಷ್ಟಾಚಾರವನ್ನು  ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ.   ಅವರ ಅನಾಚಾರ, ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.   

Comments 0
Add Comment

  Related Posts

  Sudeep Meets HD Kumaraswamy

  video | Monday, April 2nd, 2018

  Sudeep Meets HD Kumaraswamy

  video | Monday, April 2nd, 2018

  CM Siddaramaiah talks against H D Kumaraswamy on contesting at two constituencies

  video | Saturday, April 7th, 2018
  Shrilakshmi Shri