ಸುದೀಪ್ ನಮ್ಮ ಸಮಾಜದವರು, ನನಗೆ ಬೆಂಬಲ ನೀಡಲಿ

First Published 4, May 2018, 5:32 PM IST
Sriramulu Appeal Support Sudeep
Highlights

ಶ್ರೀರಾಮುಲು ಗೆಲ್ಲಿಸಲು ನಮ್ಮ ಸಮಾಜದವರಾದ ಸುದೀಪ್ ಕೂಡಾ ಪ್ರಯತ್ನಿಸಲಿ. ನಾನು 2 ಕಡೆ ಸ್ಪರ್ಧೆ ಮಾಡಿದ್ದೇನೆ. ಪ್ರಮಾಣ ಮಾಡುತ್ತೇನೆ, ಎರಡೂ ಕಡೆ ಗೆಲ್ತೇನೆ. ನಾನು ಸುದೀಪ್ ಅಭಿಮಾನಿ. ನಮ್ಮ ಸಮಾಜದವರಾದ ಅವರು ನನಗೆ ಬೆಂಬಲಿಸಲಿ. ಬಾದಾಮಿಯಲ್ಲಿ ಧರ್ಮ ಹಾಗೂ ಅಧರ್ಮದ ನಡುವೆ ಫೈಟ್ ಇದೆ. ಸತ್ಯ, ಧರ್ಮ ಶ್ರೀರಾಮುಲು ಕಡೆ. 

ಕೊಳ್ಳೆಗಾಲ(ಮೇ.04): ಸುದೀಪ್ ನಮ್ಮ ಸಮಾಜದವರು ನನಗೆ ಪ್ರಚಾರ ಮಾಡಲಿ ಎಂದು ಬಿಜೆಪಿ ನಾಯಕ ಶ್ರೀರಾಮುಲು ತಿಳಿಸಿದ್ದಾರೆ.
ಕೊಳ್ಳೇಗಾರ ಬಿಜೆಪಿ ಅಭ್ಯರ್ಥಿ ಬಿ.ಎನ್. ನಂಜುಂಡಸ್ವಾಮಿ ಪರ ಪ್ರಚಾರ ಮಾಡಿದ ಅವರು, ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ನಮ್ಮ ಸಮಾಜದ ಹಿರಿಯ ಕಲಾವಿದರು. ಅವರಿಗೆ ನಾವೆಲ್ಲರೂ ಅಭಿಮಾನಿಗಳು. ನಮಗೆ ಚಿತ್ರರಂಗ ಗೊತ್ತಿಲ್ಲ, ನಮಗೆ ಗೊತ್ತಿರುವುದೇ ರಾಜಕೀಯ ಎಂದು ತಿಳಿಸಿದರು.
ಶ್ರೀರಾಮುಲು ಗೆಲ್ಲಿಸಲು ನಮ್ಮ ಸಮಾಜದವರಾದ ಸುದೀಪ್ ಕೂಡಾ ಪ್ರಯತ್ನಿಸಲಿ. ನಾನು 2 ಕಡೆ ಸ್ಪರ್ಧೆ ಮಾಡಿದ್ದೇನೆ. ಪ್ರಮಾಣ ಮಾಡುತ್ತೇನೆ, ಎರಡೂ ಕಡೆ ಗೆಲ್ತೇನೆ. ನಾನು ಸುದೀಪ್ ಅಭಿಮಾನಿ. ನಮ್ಮ ಸಮಾಜದವರಾದ ಅವರು ನನಗೆ ಬೆಂಬಲಿಸಲಿ. ಬಾದಾಮಿಯಲ್ಲಿ ಧರ್ಮ ಹಾಗೂ ಅಧರ್ಮದ ನಡುವೆ ಫೈಟ್ ಇದೆ. ಸತ್ಯ, ಧರ್ಮ ಶ್ರೀರಾಮುಲು ಕಡೆ. ಹಿಂಸೆ ಹಾಗೂ ಅಧರ್ಮ ಸಿದ್ದರಾಮಯ್ಯ ಕಡೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲುತ್ತಾರೆ. ಶ್ರೀರಾಮುಲು ಗೆಲ್ತಾರೆ' ಎಂದು ಹೇಳಿದರು.

(ಸಾಂದರ್ಭಿಕ ಚಿತ್ರ)

loader