ಇದು ಈ ಬಾರಿಯ ಚುನಾವಣಾ ವಿಶೇಷತೆಗಳು

karnataka-assembly-election-2018 | Saturday, May 12th, 2018
Sujatha NR
Highlights

ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಹಲವು ಮತದಾರ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಆಯೋಗವು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈ ಬಾರಿ ಕೈಗೊಂಡಿರುವ ಮತದಾರ ಸ್ನೇಹಿ ಉಪಕ್ರಮಗಳು ಮತ್ತು ಚುನಾವಣಾ ವಿಶೇಷತೆಗಳು ಇಲ್ಲಿವೆ.

ಬೆಂಗಳೂರು: ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಹಲವು ಮತದಾರ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಆಯೋಗವು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈ ಬಾರಿ ಕೈಗೊಂಡಿರುವ ಮತದಾರ ಸ್ನೇಹಿ ಉಪಕ್ರಮಗಳು ಮತ್ತು ಚುನಾವಣಾ ವಿಶೇಷತೆಗಳು ಇಲ್ಲಿವೆ.

ಬುಡಕಟ್ಟು ಮತಗಟ್ಟೆಗಳು

ಬುಡಕಟ್ಟು ಮತದಾರರನ್ನು ಉತ್ತೇಜಿಸಲು ಮೈಸೂರು, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಆದಿವಾಸಿ ಬುಡಕಟ್ಟು ಸಮುದಾಯ ಹೆಚ್ಚಿರುವ ಕಡೆ ಸಾಂಪ್ರದಾಯಿಕ ಮತಗಟ್ಟೆಗಳನ್ನು ರೂಪಿಸಲಾಗಿದೆ. ಇವುಗಳನ್ನು ಆದಿವಾಸಿಗಳ ಮನೆಗಳಂತೆಯೇ ನಿರ್ಮಿಸ
ಲಾಗಿದೆ.

ಚುನಾವಣಾ ಧ್ಯೇಯಗೀತೆ

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಚುನಾವಣಾ ಧ್ಯೇಯ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಈ ಧ್ಯೇಯಗೀತೆ ಜನ ಸಮುದಾಯವನ್ನು ತಲುಪಿ ಮತದಾನಕ್ಕೆ ಉತ್ತೇಜಿಸಿ ದೆ. ನೈತಿಕ ಮತದಾನ ಕುರಿತು ಪ್ರಮುಖ ಪಾತ್ರ ವಹಿಸಿದೆ. ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶಿಸಿರುವ ಗೀತೆಯ ಚಿತ್ರೀಕರಣ ರಾಜ್ಯದೆಲ್ಲೆಡೆ ನಡೆದಿದೆ.150ಕ್ಕೂ ಹೆಚ್ಚು ಕಲಾವಿದರು ಗೀತೆಯಲ್ಲಿ ಭಾಗವಹಿಸಿದ್ದರು.

ಗಣ್ಯ ರಾಯಭಾರಿಗಳು
ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿ ಸುವಂತೆ ಪ್ರೇರೇಪಿಸಲು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ನಟ ಪುನೀತ್ ರಾಜ್‌ಕುಮಾರ್, ವಸಿಷ್ಠ ಸಿಂಹ, ನಟಿ ಪ್ರಣೀತಾ, ವೈಷ್ಣವಿ, ಅಂಧ ಸಾಧಕಿ ಅಶ್ವಿನಿ ಅಂಗಡಿ, ಭಾರತರತ್ನ ಪುರಸ್ಕೃತ ಸಿ.ಎನ್.ಆರ್.ರಾವ್, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ ಮತ್ತು ಕ್ರೀಡಾಪಟು ಗಿರೀಶ್ ರಾಯಭಾರಿಗಳಾಗಿದ್ದಾರೆ.

ಮೊದಲ ಬಾರಿ ಎಂ3 ಇವಿಎಂ
ಇದೇ ಮೊದಲ ಬಾರಿಗೆ ಮೂರನೇ ತಲೆಮಾರಿನ ಎಂ3 ಇವಿಎಂಗಳನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರಿಚಯಿಸಲಾಗುತ್ತಿದೆ. ಎಂ೩ ಇವಿಎಂಗಳನ್ನು ಬೆಂಗಳೂರು ಕೇಂದ್ರದ ಏಳು ವಿಧಾನಸಭಾ ಕ್ಷೇತ್ರದಲ್ಲಿ ಬಳಕೆ ಮಾಡ ಲಾಗುತ್ತಿದೆ. ಎಂ3 ಇವಿಎಂ 384ಅಭ್ಯರ್ಥಿಗಳ ದತ್ತಾಂಶ ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. 64 ಅಭ್ಯರ್ಥಿ  ಗಳ ದತ್ತಾಂಶ, ಮಾಹಿತಿಯನ್ನು ಏಕಕಾಲಕ್ಕೆ ಪಡೆದು ಕೊಳ್ಳಬಹುದು. ಯಂತ್ರವನ್ನು ಬಿಎಎಲ್ ಸಂಸ್ಥೆ ತಯಾರಿಸಿದೆ

ಅಂಗವಿಕಲ ಸಿಬ್ಬಂದಿ ನೇಮಕ

112 ಅಂಗವಿಕಲ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 13 ಮತಗಟ್ಟೆಗಳು ಅಂಗವಿಕಲ ಸಿಬ್ಬಂದಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡುತ್ತಿವೆ. 56 ಮತಗಟ್ಟೆಗಳಲ್ಲಿ ಒಬ್ಬರಿಗಿಂತ ಹೆಚ್ಚು ಅಂಗವಿಕಲರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಭ್ಯರ್ಥಿ ಹೆಸರಿನ ಪಕ್ಕ ಫೋಟೋ

ಒಂದೇ ಹೆಸರಿನ ಹಲವು ವ್ಯಕ್ತಿಗಳು ಚುನಾವಣಾ ಕಣಕ್ಕೆ ಧುಮುಕಿರುವುದರಿಂದ ಮತದಾರರಲ್ಲಿ ಗೊಂದಲ ತಪ್ಪಿಸಲು ಇವಿಎಂಗಳಲ್ಲಿ ಅಭ್ಯರ್ಥಿಗಳ ಹೆಸರಿನ ಪಕ್ಕದಲ್ಲಿ  ಅವರ ಛಾಯಾಚಿತ್ರಗಳನ್ನು ಅಂಟಿಸಲಾಗುತ್ತಿದೆ. ಈ ಛಾಯಾಚಿತ್ರಗಳು ಅವರ ಹೆಸರಿನ ಪಕ್ಕದಲ್ಲಿಯೇ ಇದ್ದು ಮತದಾರರಿಗೆ ಅಭ್ಯರ್ಥಿಗಳನ್ನು ಗುರುತಿಸಲು ನೆರವಾಗಲಿದೆ. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಅಭ್ಯರ್ಥಿಗಳ ಛಾಯಾಚಿತ್ರ ಬಳಕೆ ಮಾಡಲಾಗುತ್ತಿದೆ. 

ಎಡಗೈ ತೋರು ಬೆರಳಿಗೆ ಶಾಯಿ 

ಮತ ಮತ ಚಲಾಯಿಸುವ ಮತದಾರರ ಎಡಗೈ ತೋರು ಬೆರಳಿಗೆ ಶಾಯಿ ಹಾಕಲು ಚುನಾವಣಾ ಆಯೋಗವು ಸಿಬ್ಬಂದಿಗೆ ಸೂಚನೆ ನೀಡಿದೆ.

ಆ್ಯಪ್ ನೋಡಿ, ಮತಗಟ್ಟೆಗೆ ಹೋಗಿ

ಜನರು ಮತದಾನ ಮಾಡದಿರಲು ಪ್ರಮುಖ ಕಾರಣ ಬಹ ಳಷ್ಟು ಮಂದಿಗೆ ಮತಗಟ್ಟೆ ಗೊತ್ತಿಲ್ಲದಿರುವುದು. ನಾವಿಗೇಟರ್ ಆ್ಯಪ್ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗಲಿದೆ

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR